ರಾಖಿ ಹೊಸ ರಗಳೆ ಸನ್ನಿ, ಬಿಪಾಶ ಕೆಂಗಣ್ಣು

ಬಾಲಿವುಡ್‌ನ ಸೆಕ್ಸ್‌ಬಾಂಬ್ ರಾಖಿ ಸಾವಂತ್ , ನಟಿಯರಾದ ಸನ್ನಿ ಲಿಯೋನ್ ಮತ್ತು ಬಿಪಾಶ ಬಸು ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತಿನಲ್ಲಿ ಕಾಣಸಿಕೊಳ್ಳಬೇಡಿ ನಾನು ಹೇಳುವುದನ್ನೇ ಬಳಸಿ ಎನ್ನುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಬಾಲಿವುಡ್ ನಟಿಯರಿಗೆ ಒಂದಲ್ಲ ಒಂದು ರಗಳೆ ಮಾಡಿಕೊಳ್ಳದಿದ್ದರೆ ತಿಂದ ಅನ್ನ ಅರಗುವುದಿಲ್ಲ. ಅದರಲ್ಲಿಯೂ ರಾಖಿ ಸಾವಂತ್ ಸೇರಿದಂತೆ ಅನೇಕ ನಟಿಯರು ಸಿನಿಮಾಗಿಂತ ಬಿಟ್ಟಿ ಪ್ರಚಾರ ಪಡೆಯುವುದರಲ್ಲಿಯೇ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ.
ಇದೀಗ ಸೆಕ್ಸ್ ಬಾಂಬ್ ರಾಖಿ ಸಾವಂತ್ ಹೇಳಿಕೆ ವಿವಾದ ಮತ್ತು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ನಟಿಯರಾದ ಸನ್ನಿ ಲಿಯೋನ್ ಮತ್ತು ಬಿಪಾಶಾ ಬಸು ಕಾಣಿಸಿಕೊಂಡಿರುವ ಜಾಹೀರಾತಿನ ಕಾಂಡೋಮ್ ಗಳನ್ನು ಬಳಸಬೇಡಿ ಎಂದು ತಮ್ಮ ಅಭಿಮಾನಿಗಳೀಗೆ ಹೇಳುವ ಮೂಲಕ ಬಿಪಾಶ ಮತ್ತು ಸನ್ನಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇವರಿಬ್ಬರು ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತು ಮತ್ತು ಅದರ ಗುಣಮಟ್ಟ ಸರಿಯಿಲ್ಲ ನಾನು ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತುಗಳನ್ನೇ ಬಳಸಿ. ಅದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ ಜೊತೆಗೆ ಮೋಸ ಮಾಡುವುದಿಲ್ಲ ಎಂದು ರಾಖಿ ತನ್ನ ಅಭಿಮಾನಿಗಳಿಗೆ ಹೇಳಿದ್ದಾಳೆ.
ನನ್ನ ಪರ್ಸ್‌ನಲ್ಲಿಯೂ ಕಾಂಡೋಮ್ ಇದೆ. ಪಾಕೆಟ್ ಮೇ ರಾಕೆಟ್ ಎಂದು ಡೈಲಾಗ್ ಹೊಡೆದಿರುವ ರಾಖಿ ಸಾವಂತ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಖಿಯ ವಿಡಿಯೋ ಅನೇಕ ಜನ ನೋಡಿದ್ದು, ಅದರ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸನ್ನಿ ಲಿಯೋನ್ ಕಾಣಿಸಿಕೊಳ್ಳಲಿ ಅಥವಾ ಬಿಪಾಶ ಬಸು ಇರಲಿ, ಇಲ್ಲ ರಾಖಿ ಸಾವಂತ್ ಆದರೂ ಸರಿ, ಯಾವುದೇ ಆದರೂ ಗುಣಮಟ್ಟದಿಂದ ಕೂಡಿರಬೇಕು ಅದನ್ನು ಬಿಟ್ಟು ಅವರು ಕಾಣಿಸಿಕೊಂಡಿರುವ ಕಾಂಡೋಮ್ ಬೇಡ ತಮ್ಮ ತಮ್ಮ ಕಾಂಡೋಮ್ ಬಳಸಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಮದುವೆಗೆ ಶುಭಕೋರುವಾಗ, ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಕಾಂಡೋಮ್‌ಗಳನ್ನೇ ಬಳಸಿ ಎಂಬ ಉಚಿತ ಸಲಹೆಯನ್ನು ರಾಖಿ ನೀಡಿದ್ದರು
ಸನ್ನಿ ಲಿಯೋನ್ ನನ್ನ ಫೋನ್ ನಂಬರನ್ನು ವಯಸ್ಕರ ಚಿತ್ರರಂಗದವರಿಗೆ ನೀಡಿದ್ದಾರೆ. ನನಗೆ ಕರೆ ಮಾಡಿದ ಕೆಲವರು ನನ್ನನ್ನು ಪೋರ್ನ್ ಫಿಲ್ಮ್‌ಗಳಲ್ಲಿ ನಟಿಸಲು ಆಹ್ವಾನಿಸಿದ್ದಾರೆ. ನನ್ನ ನಂಬರ್ ನಿಮಗೆ ಯಾರು ಕೊಟ್ಟರು ಅಂತಾ ಕೇಳಿದ್ದಕ್ಕೆ ಸನ್ನಿ ಲಿಯೋನ್ ಹೆಸರು ಹೇಳಿದ್ದಾರೆ ಎಂದು ರಾಖಿ ಸಾವಂತ್ ಹೊಸ ಬಾಂಬ್ ಸಿಡಿಸಿದ್ಧಾರೆ.
ಸನ್ನಿ ಲಿಯೋನ್ ತರ ನೀಲಿ ಚಿತ್ರಗಳಲ್ಲಿ ಯಾವುದೇ ಕಾರಣಕ್ಕೆ ನಟಿಸುವುದಿಲ್ಲ. ಚಿತ್ರಗಳು ಇಲ್ಲದಿದ್ದರೆ ಮನೆಯಲ್ಲಿರುತ್ತೇನೆ. ಅವಕಾಶಕ್ಕಾಗಿ ಅಡ್ಡದಾರಿ ಹಿಡಿಯುವುದಿಲ್ಲ ಎಂದಿದ್ದಾರೆ ರಾಖಿ.

 

Leave a Comment