ರಾಕಿಂಗ್ ಸ್ಟಾರ್ ಹುಟ್ಟುಹಬ್ಬ- ಅಭಿಮಾನಿಗಳ ವಿಭಿನ್ನ ಆಚರಣೆ

ಬೆಂಗಳೂರು, ಜ ೮- ರಾಕಿಂಗ್ ಸ್ಟಾರ್ ಯಶ್‌ಗೆ ಇಂದು ೩೩ನೇ ಹುಟ್ಟುಹಬ್ಬದ ಸಂಭ್ರಮ. ಅಂಬಿ ನಿಧನದಿಂದ ಈ ಬಾರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ ಯಶ್‌ಗೆ ಅಭಿಮಾನಿಗಳು ಪ್ರೀತಿಯಿಂದ ಪೋಟೋವೊಂದನ್ನು ಶೇರ್ ಮಾಡುವ ಮೂಲಕ ಶುಭಾಶಯ ರವಾನಿಸಿದ್ದಾರೆ.
ಯಶ್ ಅವರು ತಂದೆಯಾದ ಬಳಿಕ ಇದು ಅವರ ಮೊದಲನೇ ಹುಟ್ಟುಹಬ್ಬವಾಗಿದ್ದು, ಸೋಮವಾರ ಯಶ್ ಟ್ವಿಟ್ಟರಿನಲ್ಲಿ ಲೈವ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ, ಈ ವರ್ಷ ಜನ್ಮದಿನ ಆಚರಿಸುತ್ತಿಲ್ಲ. ಅಭಿಮಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಅಭಿಮಾನಿಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಫೋಟೋ ಹಾಕುವುದರ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

ಯಶ್ ೨೦೦೭ ರಲ್ಲಿ ಜಂಭದ ಹುಡುಗಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು, ಅವರ ಎರಡನೆಯ ಚಿತ್ರವಾದ ಮೊಗ್ಗಿನ ಮನಸು. ಈ ಚಿತ್ರ ಯಶ್ ಗೆ ಯಶಸ್ಸು ತಂದು ಕೊಟ್ಟಿತು ಮತ್ತು ಅವರಿಗೆ ಅತ್ಯುತ್ತಮ ಪೋಷಕ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ನಂತರ ಮೊದಲ ಸಲ , ಕಿರಾತಕ , ಡ್ರಾಮ , ಗೂಗ್ಲಿ , ರಾಜಾ ಹುಲಿ , ಗಜಕೇಸರಿ , ಮಿ.ಮಿಸ್ಟರ್ ರಾಮಚಾರಿ,ಮಾಸ್ಟರ್ ಪೀಸ್, ಇದೀಗ ಕೆಜಿಎಫ್ ಮುಂತಾದ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

Leave a Comment