ರಾಂಧವ ಟ್ರೈಲರ್‌ಗೆ ಪ್ರಶಂಸೆ

ಕಳೆದ ವರ್ಷ ಮಹೂರ್ತ ಆಚರಿಸಿಕೊಂಡ ಐತಿಹಾಸಿಕ ಆಕ್ಷನ್ ಸಿನಿಮಾ ’ರಾಂಧವ’ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದತೆ ನಡೆಸಿರುವ ಬೆನ್ನಲ್ಲೇ ಕಳೆದ ಶನಿವಾರ ಚಿತ್ರದ ಟ್ರೈಲರ್ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು.  ಟ್ರೈಲರ್‌ಗೆ ಚಾಲನೆ ನೀಡಿದ ಮಾಜಿ ಉಪಮುಖ್ಯ ಮಂತ್ರಿ ಹಾಗೂ ಶಾಸಕ ಆರ್.ಆಶೋಕ್ ಮಾತನಾಡಿ ಭುವನ್ ಕಷ್ಟಪಟ್ಟು ಮೇಲೆ ಬರುತ್ತಿದ್ದಾರೆ. ಛಾಯಗ್ರಹಣ ಮತ್ತು ಆಕ್ಷನ್ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರು ಚಿತ್ರಮಂದಿರ ಮುಂದೆ ದೂಡ್ಡ ಸಾಲು ನಿಲ್ಲುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು.

raandhava3

ಮಂಗ ಮಾಣಿಕ್ಯ ಆದಂತೆ ಕನ್ನಡ ಚಿತ್ರರಂಗ ತಾರಕಕ್ಕೆ ಹೋಗುತ್ತಿದೆ. ಭುವನ್ ಸ್ಪುರದ್ರೂಪಿ ನಟ. ಅವರಿಗೆ ಭವಿಷ್ಯವಿದೆ. ಮೊಬೈಲ್ ಬಳಕೆಯಿಂದ ಚಿತ್ರರಂಗವು ಹಾಳಾಗುತ್ತಿದೆ. ಕರ್ನಾಟಕದ ಎಲ್ಲಾ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಅನುಮತಿ ನೀಡಬೇಕು. ಹಾಸನದಲ್ಲಿ ಪುರಾತನ ಕಾಲದ ದೇವಸ್ಥಾನಗಳು ಇರುವುದು ತಿಳಿದುಬಂದಿದೆ. ಬೇಲೂರು,ಹಳೇಬೀಡುಗಿಂತ ಹಳೆಯದಾಗಿದೆ. ಇದು ಜನರಿಗೆ ಅರಿಯದೆ ಇರುವುದಕ್ಕೆ ದೊಡ್ಡಣ್ಣ ವಿಷಾದಿಸಿದರು.

ಚಂದನವನವು ಉತ್ತಮ ರೀತಿಯಲ್ಲಿ  ಬೆಳೆಯುತ್ತಿದೆ. ಅದರಲ್ಲಿ ಭುವನ್‌ಗೆ ಒಳ್ಳೆಯದಾಗಲೆಂದು  ಶುಭಹಾರೈಸಿದ್ದು ನಟಿ ಅಮೂಲ್ಯ ಜಗದೀಶ್.ಕಂಪ್ಯೂಟರ್‌ನಲ್ಲಿ ನೋಡಿದಾಗ ಚೆನ್ನಾಗಿದೆ ಅನಿಸಿತು. ಇಂದು ದೊಡ್ಡ ಪರದೆ ಮೇಲೆ ವೀಕ್ಷಿಸಿದಾಗ ಬಹಳ ಚನ್ನಾಗಿದೆ ಎಂದು ಪ್ರಿಯಾಂಕಉಪೇಂದ್ರ ಬಣ್ಣನೆ ಮಾಡಿದರು ಹಾಡುಗಳು ಇಷ್ಟವಾಗಿದ್ದಕ್ಕೆ ಹಕ್ಕುಗಳನ್ನು ತೆಗೆದುಕೊಂಡಿರುವುದಾಗಿ ಆನಂದ್ ಆಡಿಯೋ ಶ್ಯಾಮ್ ಹೇಳಿದರು.

ಯುವ ಕಲಾವಿದರು ದುರಂಹಕಾರವನ್ನು  ತೋರದೆ ಇದ್ದರೆ ಇಲ್ಲಿ ಬೆಳೆಯಲು  ಸಾದ್ಯ.  ಟ್ರಾನ್ಸಿಸಿಸ್ಟರ್, ರೇಡಿಯೋ, ಟಿವಿ ಸೆಟ್‌ಗಳನ್ನು  ತಯಾರಿಸುವ ತನಕ ಬದುಕನ್ನು ಕಂಡಿದ್ದೇನೆ. ಕನ್ನಡಿಗರು ಕನ್ನಡ ಚಿತ್ರಗಳನ್ನು ಅವಹೇಳನೆ ಮಾಡದೆ ನೋಡಬೇಕು ಎಂದರು ನಿರ್ಮಾಪಕ ಸನತ್‌ಕುಮಾರ್.

raandhava1

ಹತ್ತು ವರ್ಷದ ಕೆಳಗೆ ಮನರಂಜನಾ ಕ್ಷೇತ್ರಕ್ಕೆ ಬರಬೇಕೆಂದು ಬೆಂಗಳೂರಿಗೆ ಬರಲಾಯಿತು. ಪೋಸ್ಟರ್‌ಗಳನ್ನು  ನೋಡುತ್ತಾ, ಅದರಲ್ಲಿ ನಾನು ಯಾವಾಗ ಕಾಣುವುದೆಂದು ಬಯಕೆ ಪಡುತ್ತಿದ್ದೆ. ಬಿಗ್ ಬಾಸ್ ಮನೆಯಿಂದ ಹೂರಬಂದ ನಂತರ ೧೧ ಕತೆಗಳನ್ನು ಕೇಳಲಾಗಿ, ಅದರಲ್ಲಿ ರಾಂಧವ ಇದೆ.  ಹಾಲಿವುಡ್ ಶಾಲೆಯಲ್ಲಿ ಅಭಿನಯವನ್ನು ಕಲಿಯಲಾಗಿದೆ. ಮಗಧೀರ, ಬಾಹುಬಲಿಗಿಂತ ರಾಂಧವ ಚೆನ್ನಾಗಿ ಬರುತ್ತಿರುವುದು ಖುಷಿ ತಂದಿದೆ ಎಂದರುನಾಯಕ ಭುವನ್.

ಚಿತ್ರ ನೋಡಿದವರು ನಿರ್ದೇಶಕರ ಪ್ರಥಮ ಸಿನಿಮಾ ಎನ್ನುವುದಿಲ್ಲ.  ಒಳ್ಳೆ ತಂಡವಿದ್ದರೆ ಮೇಕಿಂಗ್ ಕಷ್ಟ ಅನಿಸುವುದಿಲ್ಲ. ಬೇರೆ ಭಾಷೆಯಲ್ಲಿ ಸಾಮಾನ್ಯ ಚಿತ್ರಗಳು ಇದ್ದರೂ , ಕನ್ನಡ ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತವೆಂದು ನಿರ್ದೇಶಕ ಸುನಿಲ್‌ಆಚಾರ್ಯ ಹೇಳಿದರು.ಮೊದಲ ಬಾರಿ ಸಂಗೀತ ಸಂಯೋಜಿಸಿರುವ ಗಾಯಕ ಶಶಾಂಕ್‌ಶೇಷಗಿರಿ ಮೆಲೋಡಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು.

Leave a Comment