ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಜಾಥಾ

ಹರಿಹರ.ಸೆ.23; ರಸ್ತೆ ಸುರಕ್ಷತೆ ಬಗ್ಗೆ ವಾಹನ ಸವಾರರು ಎಚ್ಚರ ವಹಿಸಬೇಕು. ಸಂಚಾರಿ ನಿಯಮಗಳನ್ನು ಅನುಸರಿಸಿದರೆ ಮಾತ್ರ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ನಗರ ಮತ್ತು ಗ್ರಾಮಾಂತರ ಪಿಎಸ್‍ಐ ರವಿಕುಮಾರ್ ಹೇಳಿದರು. ನಗರದಲ್ಲಿ  ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿರ್ವಹಣೆ ಕುರಿತಂತೆ ಹಿರಿಯ ಪ್ರಾಥಮಿಕ ಪಾಠಶಾಲೆ, ಎಂಆರ್ಬಿ ಶಾಲೆ ಉರ್ದು ಹಿರಿಯ  ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ  ಸಂಚಾರಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಜಾಥಾ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡದೆ ವಾಹನಗಳನ್ನು ಚಲಿಸಬೇಕು. ವಾಹನ ಸವಾರರು ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸಬೇಕೆಂದು ಹೇಳಿದರು. ಜಾಗೃತಿ ಜಾಥಾದಲ್ಲಿ ನಾನಾ ಶಾಲೆಗಳ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಗಮನ ಸೆಳೆದ ಫಲಕ: ಶಾಲಾ ಮಕ್ಕಳು ಹಿಡಿದಿದ್ದ ಘೋಷಣಾ ಫಲಕ ಗಮನ ಸೆಳೆಯಿತು. ರಸ್ತೆಯ ಆಟ-ಜೀವಕ್ಕೆ ಪಾಠ, ವಾಹನ ನಿಮ್ಮದು- ರಸ್ತೆ ಸರ್ವರದು ಹೀಗೆ ಬಗೆ ಬಗೆಯ ಘೋಷಣೆಗಳಿದ್ದವು. ವಿವಿಧ ಶಾಲೆಗಳಿಂದ ಬಂದಂತಹ ವಿದ್ಯಾರ್ಥಿಗಳು ಘೋಷಣೆಗಳ ಫಲಕಗಳನ್ನು ಹಿಡಿದಿರುವುದು ಸಾರ್ವಜನಿಕರಲ್ಲಿ ವಾಹನ ಸವಾರರಲ್ಲಿ ಜಾಗೃತಿಯನ್ನು ಮೂಡಿಸಿರುವುದಕ್ಕೆ ಪೆÇಲೀಸ್ ಇಲಾಖೆಯಿಂದ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯು ಬಸವರಾಜಪ್ಪ, ಸಿಆರ್ಪಿಗಳಾದ ರೇವಣ್ಣ, ತಿಪ್ಪೇಶ್, ಬಿಆರ್ಪಿ ಗಿರೀಶ್, ಶ್ರೀನಿವಾಸ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪಿ ಶಿವಮೂರ್ತಿ, ಎಂಆರ್ಪಿ ಉರ್ದು ಶಾಲೆ,ಡಿಆರ್‍ಎಂ ಶಾಲೆಯ ಶಿಕ್ಷಕ ವೃಂದದವರು, ಪೆÇಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು

Leave a Comment