ರಸ್ತೆ ಸುರಕ್ಷತಾ ಸಪ್ತಾಹ- ಜಾಗೃತಿ

ಹುಬ್ಬಳ್ಳಿ, ಜ.22 – 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಂಗವಾಗಿ ಧಾರವಾಡ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾ ಆಡಳಿತ. ಸಾರಿಗೆ, ಪೋಲಿಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಮಿತಿಯ ಇತರೆ ಪಾಲುದಾರಕೆ ಇಲಾಖೆಗಳು ಹಾಗೂ ಹುಬ್ಬಳ್ಳಿ-ಧಾರವಾಡ ಮೋಟಾರು ವಾಹನ ತರಬೇತಿ ಶಾಲೆಗಳ ಸಹಯೋಗದಲ್ಲಿಂದು ನಗರದ ಚೆನ್ನಮ್ಮ ವೃತ್ತದಲ್ಲಿ ಮೋಟಾರು ಕಾರು ರ್ಯಾಲಿ ಹಮ್ಮಿಕೊಳ್ಳಲಾಯಿತು.
ರಸ್ತೆ ನಿಯಮ ಪಾಲನೆ ಮಾಡಣ್ಣ, ಜೀವ ಉಳಿಯುವುದು ನೋಡಾ…ಜೀಬ್ರಾ ಪಾತ್ ಮೇಲೇ ಹೋಗೋಣ ಬಾರಾ ರಸ್ತೆ ನಿಯಮ ಪಾಲನೆ ಮಾಡಾ ನಿನ್ನ ಜೀವ ನಿನ್ನ ಕೈಯಾಗ ನೋಡಾ… ಎಂದು ನಗರದ ಕಿತ್ತೂರ ಚನ್ನಮ್ಮ ವೈತ್ತದಲ್ಲಿ ಇಂದು ಬೆಳಿಗ್ಗೆ ಮೋಳಗಿದ ಸುಶ್ರಾವ್ಯವಾದ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಗೀತೆಗಳು ಸಾರ್ವಜನಿಕರು, ವಿಧ್ಯಾರ್ಥಿಗಳು, ವಾಹನ ಸವಾರರು ಮತ್ತು ಪಾದಚಾರಿಗಳ ಮನಸೆಳೆದವು. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಳಿತ, ಸಾರಿಗೆ, ಪೊಲೀಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹುಬ್ಬಳ್ಳಿ ಧಾರವಾಡ ಮೋಟಾರು ವಾಹನ ತರಬೇತಿ ಶಾಲೆಗಳ ಸಹಯೋಗದಲ್ಲಿ ಇಂದು 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಬೀದಿನಾಟಕ ಮತ್ತು ಜಾಗೃತಿ ಗೀತೆಗಳ ಕಾರ್ಯಕ್ರಮದಲ್ಲಿ ಕುಂದಗೋಳ ತಾಲೂಕಿನ ಹರ್ಲಾಪೂರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಮತ್ತು ಜನಪದ ಫೌಂಡೇಶನ್ ಕಲಾವಿದರು ಪ್ರದರ್ಶಿಸಿದ ನಾಟಕ ಹಾಗೂ ಗೀತೆಗಳು ಜನರ ಮನಮುಟ್ಟಿದವು.
ಹರ್ಲಾಪುರದ ಎಸ್.ಎಸ್.ಹೀರೆಮಠ, ಈಶ್ವರ ಅರಳಿ, ಚಂದ್ರಶೇಖರ ಕಾಳೆ, ಪ್ರಕಾಶ ದೊಡ್ಡೂರ, ಮಲ್ಲೇಶ ಮುಳಗುಂದ, ಶಿವಪ್ಪ ಡಂಬಳ, ನಾಗರಾಜ ಗೌಡಣ್ಣವರ್, ಶರೀಫ್ ದೊಡ್ಡಮನಿ, ಅನ್ನಪೂರ್ಣ ಮಡಿವಾಳರ ಸೇರಿದಂತೆ ಹಲವಾರು ಕಲಾವಿದರ ಹಾಡು, ಅಭಿನಯ ಜನರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾದವು.
ಯುವ ಬಲದಿಂದಲೇ ಬದಲಾವಣೆ ಸಾಧ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿರುವ ರ್ಯಾಲಿಗೆ, ಹುಬ್ಬಳ್ಳಿ ಚನ್ನಮ್ಮ ವೃತ್ತದ ಬಳಿ ಸಂಚಾರ ಸಹಾಯಕ ಪೊಲೀಸ್ ಆಯುಕ್ತ ಎಸ್.ಎಂ ಸಂದಿಗವಾಡ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಯ್ಯಪ್ಪ ನಲ್ವತ್ತಾಡಮಠ

Leave a Comment