ರಸ್ತೆ ಬದಿ ಗಿಡ ನೆಡುವ ಕಾರ್ಯಕ್ಕೆ ನಗರ ಶಾಸಕರಿಂದ ಚಾಲನೆ

ಬಳ್ಳಾರಿ, ಜು.1: ನಗರದ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವ ಅರಣ್ಯ ಇಲಾಕೆಯ ಕಾರ್ಯಕ್ಕೆ ಇಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಇಂದು ಚಾಲನೆ ನೀಡಿದರು.

ನಗರವನ್ನು ಹಸರೀಕರಣ ಮಾಡಲು ಹೆಚ್ಚಾಗಿ ಸಾರ್ವಜನಿಕರೆಲ್ಲ ಸಹಕರಿಸಬೇಕು, ಎಲ್ಲರೂ ತಮ್ಮ ತಮ್ಮ‌ನಿವಾಸಗಳ ಮುಂದೆ ಗಿಡಗಳನ್ನು ನೆಡುವುದರ ಜೊತೆಗೆ ರಸ್ತೆಗಳಲ್ಲಿನ ಗಿಡಗಳನ್ನು ರಕ್ಷಣೆ ಮಾಡಬೇಕು ಎಂದರು.

ಮುಖಂಡರಾದ ವೀರಶೇಖರ ರೆಡ್ಡಿ, ಮೋತ್ಕರ್ ಶ್ರೀನಿವಾಸ್, ಎಸ್. ಮಲ್ಲನಗೌಡ, ಕೃಷ್ಣಾರೆಡ್ಡಿ ಹನುಮಂತ ಮತ್ತಿತರ ಕಾರ್ಯಕರ್ತರು ಶಾಸಕರ ಜೊತೆ ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದರು

Leave a Comment