ರಸ್ತೆ ದುರಸ್ಥಿಗೆ ಲಬೋ ಲಬೋ ಬಾಯಿ ಬಡಿದು ಪ್ರತಿಭಟನೆ

ಹುಬ್ಬಳ್ಳಿ,ನ8- ನಗರದಲ್ಲಿನ ರಸ್ತೆಗಳ  ದುರಸ್ತಿಯನ್ನು  ಖಂಡಿಸಿ ಮಹಾನಗರ ಪಾಲಿಕೆ ಎದುರು ಸಾರ್ವಜನಿಕರು ಲಬೋ ಲಬೋ ಎಂದು ಬಾಯಿ ಬಡೆದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಾರ್ವಜನಿಕರು. ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಬಾಯಿ ಬಡೆದುಕೊಳ್ಳುವುದರ ಮೂಲಕ ಪ್ರತಿಭಟನೆ ಮಾಡಿದರು.
ಅವಳಿ ನಗರದ ರಸ್ತೆಗಳೆಲ್ಲವು ಸಂಪೂರ್ಣವಾಗಿ ಹದೆಗೆಟ್ಟು ಹೋಗಿವೆ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ರಸ್ತೆಯಲ್ಲಿ ಸಂಚಾರ ಮಾಡಲು ಪ್ರಾರಂಭ ಮಾಡಿದರೆ ಕೇವಲ ಧೂಳೋ ಧೋಳು. ಇದರಿಂದ ಕುಪಿತಗೊಂಡ  ಸಾರ್ವಜನಿಕರು ಮಹಾನಗರ ಪಾಲಿಕೆಯ ಮುಂದೆ ಬಾಯಿ ಬಡೆದುಕೊಳ್ಳುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇನ್ನು ಅವಳಿ ನಗರದಲ್ಲಿ ನಡೆದ ರಸ್ತೆಯ ಕಾಮಗಾರಿಗಳೆಲ್ಲವು ಕಳಪೆ ಮಟ್ಟದಿಂದ ಕೂಡಿದೆ. ಹೀಗಾಗಿ ಇಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರ ನ್ನು ಬ್ಲಾಕ್ ಲಿಸ್ಟಿಗೆ ಹಾಕಬೇಕೆಂದು ಆರೋಪಿಸಿದರು.

Leave a Comment