ರಸ್ತೆ ದುರಸ್ತಿಗೆ ಒತ್ತಾಯ

ಹುಬ್ಬಳ್ಳಿ ನ ೧೧ – ಅವಳಿ ನಗರದ ರಸ್ತೆಗಳು ತೀವ್ರ ಹದಗೆಟ್ಟಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರು  ದಿನನಿತ್ಯ ಹಿಡಿ ಶಾಪ ಹಾಕುತ್ತಿದ್ದು, ತಕ್ಷಣ  ರಸ್ತೆ  ಡಾಂಬರೀಕರಣಗೊಳಿಸುವಂತೆ  ಆಗ್ರಹಿಸಿ ಪ್ರಮೋದ್ ದವೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸ್ಮಾರ್ಟ್ ಸಿಟಿ ಖ್ಯಾತಿಯ ಹುಬ್ಬಳ್ಳಿ ಮಹಾನಗರ ಹಾಗೂ ಧಾರವಾಡದಲ್ಲಿ  ರಸ್ತೆ ದುಸ್ಥಿತಿ ನೋಡಿ ಸ್ಮಾರ್ಟ್ ಸಿಟಿ ಎನ್ನಲು ಅಪಹಾಸ್ಯವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮಹಾನಗರ ಪಾಲಿಕೆ ಆಯುಕ್ತರು ಹುಬ್ಬಳ್ಳಿ ಮಹಾನಗರದ ಜನತೆಗೆ ತಕ್ಷಣ ನಾಗರಿಕ ಸೌಲಭ್ಯ ಕಲ್ಪಿಸಿಕೊಡುವಂತೆ  ಆಗ್ರಹಿಸಿದ್ದಾರಲ್ಲದೇ ಈ ಬಗ್ಗೆ ತಕ್ಷಣ ಗಮನ ಹರಿಸಲು ದವೆ ವಿನಂತಿಸಿದ್ದಾರೆ.

Leave a Comment