ರಸ್ತೆ ದುರಸ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ರಾಯಚೂರು.ಸೆ.14- ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಜಿಲ್ಲಾಧಿಕಾರಗಳಿಗೆ ಮನವಿ ಸಲ್ಲಿಸಿ, ಬಿಜಿನಗೇರಾ, ರಾಜಲಬಂಡಾ, ಐಜಾಪೂರ, ಮಾಸದೊಡ್ಡಿ, ಜುಲಮಗೇರಾ, ಲಿಂಗನಖಾನ ದೊಡ್ಡಿ, ಗ್ರಾಮಗಳಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೊಳಿಸಬೇಕು. ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಗ್ರಾಮಗಳಿಗೆ ಬಸ್ ಬಾರದಿರುವುದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ನಗರದ ಶಾಲಾ-ಕಾಲೇಜುಗಳಿಗೆ ತೆರಳಲು ಬಸ್ ಬಾರದಿರುವುದರಿಂದ ಖಾಸಗಿ ವಾಹನಗಳ ಮೊರೆ ಹೋಗುವ ದುಸ್ತಿತಿ ಒದಗಿ ಬಂದಿದೆ. ಕೂಡಲೇ, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಬಿಜಿನಗೇರಾ- ಲಿಂಗನಖಾನದೊಡ್ಡಿ ಗ್ರಾಮದವರೆಗೆ ರಸ್ತೆ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಯುವರಾಜ್, ತಿಮ್ಮಪ್ಪ, ಹುಸೇನಿ, ಹುಲಿಗೆಪ್ಪ, ರಾಜೇಶ್, ಈರೇಶ, ಪರಶುರಾಮ, ವೆಂಕಟಗಿರಿ, ವಿನೋದ್, ರಂಗಸ್ವಾಮಿ, ಮಂಜುನಾಥ, ಗುರುರಾಜ, ಮಹೇಶ್, ನವೀನ್, ರಾಮಚಂದ್ರ, ಫಾರುಕ್ ಸೇರಿದಂತೆ ಇನ್ನಿತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಇದ್ದರು.

Leave a Comment