ರಸ್ತೆ ಅವಘಡ ; ಬೈಕ್ ಸವಾರ ಸಾವು

ಮೈಸೂರು, ಡಿ.7- ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅವಘಡದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ.
ಕುಶಾಲನಗರ ಟಿಬೆಟಿಯನ್ ಕಾಲೋನಿಯ ತೆಂಜಿನ್ ಖೆಂಟ್ಸೆ (26) ಮೃತ ದುರ್ದೈವಿ. ಈತ ಬನ್ನಿಮಂಟಪದ ಬಳಿ ಬಾಡಿಗೆಗೆ ರೂಮು ಪಡೆದು ವಾಸವಿದ್ದು, ಅಲ್ಲಿಯೇ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ ಎನ್ನಲಾಗಿದೆ.
ಬನ್ನಿಮಂಟಪದ ಬಳಿ ಬೈಕ್ ನಲ್ಲಿ ಇಂದು ಬೆಳಗ್ಗೆ ತೆರಳುತ್ತಿದ್ದಾಗ ಮಂಜು ಕವಿದ ವಾತಾವರಣ ಇದ್ದುದರಿಂದ ರಸ್ತೆಯಲ್ಲಿರುವ ಹಂಪ್ಸ್ ನೋಡದೆ ವೇಗವಾಗಿ ಚಾಲನೆ ಮಾಡಿಕೊಂಡು ಹೋದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಗಿಂತ 100 ಮೀ. ದೂರ ಮಣ್ಣು ರಾಶಿಯ ಮೇಲೆ ಬಿದ್ದು ಮೃತಪಟ್ಟಿದ್ದಾನೆ.
ಎನ್.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರು ಸಾಗಿಸಿದ್ದಾರೆ.

Leave a Comment