ರಸ್ತೆ ಅಪಘಾತ: ಇಬ್ಬರಿಗೆ ತೀವ್ರ ಗಾಯ

ದೇವದುರ್ಗ.ಫೆ.28- ಕಾರು ಮತ್ತು ಟಾಟಾ ಏಸಿ ಮಧ್ಯೆ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿರುವ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರೆ, ಟಾಟಾ ಏಸಿಯಲ್ಲಿರುವ 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅರಕೇರ ಮತ್ತು ರಾಯಚೂರು ಮಾರ್ಗ ಮಧ್ಯೆದ ಕೋತಿಗುಡ್ಡ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಕೂಲಿ ಕೆಲಸ ಮುಗಿಸಿಕೊಂಡು ರಾಯಚೂರಿನತ್ತ ಮರುಳುತ್ತಿದ್ದ ಟಾಟಾ ಏಸಿ ಮತ್ತು ಅರಕೇರಾದತ್ತ ಸಾಗಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಹನುಮನಗೌಡ ಮತ್ತು ಸಿದ್ದಪ್ಪ ಎಂಬ ಸಹೋದರರಿಗೆ ತೀವ್ರ ಗಾಯಗಳಾಗಿದ್ದು ಉಭಯರನ್ನು ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಟಾ ಏಸಿಯಲ್ಲಿದ್ದ ಕೂಲಿ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖಾ ಕಾರ್ಯ ತೀವ್ರಗೊಳಿಸಿದೆ.

Leave a Comment