ರಸ್ತೆಗುರುಳಿದ ವಿದ್ಯುತ್ ಕಂಬ: ತಪ್ಪಿದ ದುರಂತ

ಕೊಣಾಜೆ, ಸೆ. ೧೧- ನಾಟೆಕಲ್ ಮುಖ್ಯರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬವೊಂದು ಸೋಮವಾರ ಹಠಾತ್ತನೆ ಕುಸಿದು ಬಿದ್ದ ಘಟನೆ ನಡೆದಿದೆ. ಆದರೆ ಭಾರತ ಬಂದ್ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ವಾಹನ ಸಂಚಾರ ಇರದ ಹಿನ್ನೆಲೆಯಲ್ಲಿ ಅನಾಹುತವೊಂದು ತಪ್ಪಿದೆ.
ನಾಟೆಕಲ್ ಬಳಿ ಕಂಬ ಕುಸಿದು ಬಿದ್ದ ಪರಿಣಾಮ ಮತ್ತೊಂದು ಕಂಬವೂ ಮುರಿದು ಬಿದ್ದಿತ್ತು. ಈ ಸಂದರ್ಭ ತಂತಿಯಲ್ಲಿ ವಿದ್ಯುತ್ ಸಂಪರ್ಕವೂ ಇತ್ತು ಎನ್ನಲಾಗಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರಾದ ಸಲೀಂ ಮೇಘ ಹಾಗೂ ಇನ್ನಿತರು ಸೇರಿ ಮೆಸ್ಕಾಂಗೆ ಕರೆ ಮಾಡಿ ಈ ಭಾಗದಲ್ಲಿ ವಾಹನ ಸಂಚಾರ ಮಾಡದಂತೆ ಮನವಿ ಮಾಡಿದ್ದಾರೆ. ಬಳಿಕ ಮೆಸ್ಕಾಂ ನವರು ಬಂದು ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.

Leave a Comment