ರಷ್ಯಾ – ಪಾಕ್ ನಡುವೆ ವೀಸಾ ರಹಿತ ಪ್ರಯಾಣ – ಇಮ್ರಾನ್ ಖಾನ್

ಇಸ್ಲಾಮಾಬಾದ್, ಜೂ 13 – ರಷ್ಯಾದೊಂದಿಗೆ ನಿಕಟ ಬಾಂಧವ್ಯ ಹೊಂದಲು ವೀಸಾ ರಹಿತ ಪ್ರಯಾಣ ಸೌಲಭ್ಯವನ್ನು ಪಾಕಿಸ್ತಾನ ಪಡೆಯಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಸ್ಫುಟ್ನಿಕ್ ಗೆ ನೀಡಿದ ಸಂದರ್ಶನದಲ್ಲಿ ಅವರು, ವಿಮಾನ ನಿಲ್ದಾಣದಲ್ಲೇ ವೀಸಾ ಪಡೆಯಬಹುದಾದ ಪಟ್ಟಿಯಲ್ಲಿ ಸ್ಥಾನ ದೊರೆತಿದ್ದು ಭವಿಷ್ಯದಲ್ಲಿ ವೀಸಾ ರಹಿತ ಪ್ರಯಾಣ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ, ಬಂಡವಾಳ ಹೂಡಿಕೆಗೆ ಪಾಕಿಸ್ತಾನ ತೆರೆದುಕೊಳ್ಳುತ್ತಿದ್ದು ಬೇರೆ ಬೇರೆ ದೇಶದ ಜನರಿಗೆ ಅನುಕೂಲ ಮಾಡಿಕೊಡಲು ಸದ್ಯ 70 ದೇಶಗಳ ನಾಗರಿಕರಿಗೆ ವಿಮಾನ ನಿಲ್ದಾಣದಲ್ಲೇ ವೀಸಾ ನೀಡುವ ಸೌಲಭ್ಯವಿದೆ ಎಂದು ಅವರು ಹೇಳಿದ್ದಾರೆ.

Leave a Comment