ರಶ್ಮಿಕಾ ನಿವಾಸದ ಮೇಲೆ ಐಟಿ ದಾಳಿ ಅಂತ್ಯ

ವಿರಾಜಪೇಟೆ, ಜ. ೧೭- ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆಯ ನಿವಾಸದಲ್ಲಿ ನಿನ್ನೆಯಿಂದ ನಡೆಸುತ್ತಿದ್ದ ಆದಾಯ ತೆರಿಗೆ ಇಲಾಖೆಯ ದಾಳಿ ಇಂದೂ ಕೂಡ ಮುಂದುವರೆಸಿ ಮಧ್ಯಾಹ್ನದ ವೇಳೆಗೆ ಅಧಿಕಾರಿಗಳು ದಾಳಿಯನ್ನು ಮುಗಿಸಿದ್ದಾರೆ.
ಚಿತ್ರದ ಸಂಭಾವನೆ, ಹೂಡಿಕೆ, ವಿವಿಧ ಆಸ್ತಿ-ಪಾಸ್ತಿ ಸೇರಿದಂತೆ ಹಲವು ವಿಷಯಗಳ ಕುರಿತಂತೆ ನಿನ್ನೆ ಬೆಳಿಗ್ಗೆಯಿಂದ ಇಂದು ಮಧ್ಯಾಹ್ನದವರೆಗೆ ಅಧಿಕಾರಿಗಳು ದಾಳಿ ಮುಂದುವರೆಸಿದ್ದರು.
ಈ ವೇಳೆ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳು, ಸಿನಿಮಾಗೆ ಸಹಿ ಹಾಕಿದ್ದ ಕರಾರುಪತ್ರಗಳೂ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವಿರಾಜಪೇಟೆಯ ಕುಕ್ಕಲೂರಿನಲ್ಲಿ ಐಷಾರಾಮಿ ಬಂಗಲೆ ಇದ್ದು, ಮೈತಾಡಿ ಗ್ರಾಮದಲ್ಲಿ ಮೂರು ಎಕರೆ ಕಾಫಿ ತೋಟವಿದೆ. ಇತ್ತೀಚೆಗಷ್ಟೇ ಬಿಟ್ಟಂಗಾಳದಲ್ಲಿ ಐದೂವರೆ ಎಕರೆ ಜಾಗ ಖರೀದಿಸಿದ್ದ ರಶ್ಮಿತಾ ತಂದೆ ಮದನ್ ಮಂದಣ್ಣ ಅಲ್ಲಿ ಪೆಟ್ರೋಲ್ ಬಂಕ್, ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದರು.
ಇಂದು ಮಧ್ಯಾಹ್ನದವರೆಗೂ ೧೦ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ಮುಂದುವರೆಸಿ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Comment