ರಶ್ಮಿಕಾ ನಟನೆ ಮೆಚ್ಚಿದ ಬಾಲಿವುಡ್‌ನ ಕರಣ್ ಜೋಹರ್

ಮುಂಬೈ, ಜು ೨೪- ಸ್ಯಾಂಡಲ್‌ವುಡ್‌ನಲ್ಲಿ ನಿಷೇಧ ಏರುವಂತೆ ಒತ್ತಾಯ ಹೆಚ್ಚುತ್ತಿದ್ದಂತೆ ನಟಿ ರಶ್ಮಿಕಾ ಮಂದಣ್ಣನ್ನು ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಹಾಡಿ ಹೊಗಳಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮಿಳಿನ ಪ್ರಮುಖ ವೆಬ್‌ಸೈಟ್‌ವೊಂದಕ್ಕೆ ಸಂದರ್ಶನ ನೀಡುವ ಬರದಲ್ಲಿ  ತನಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಕನ್ನಡದಲ್ಲೂ ಡಬ್ಬಿಂಗ್ ಮಾಡುವುದು ಕಷ್ಟ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದಲ್ಲದೇ ಕರ್ನಾಟಕ ಸಂಘಟನೆಗಳ ಒಕ್ಕೂಟ ಕನ್ನಡ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿ ರಶ್ಮಿಕಾರನ್ನು ಕೂಡಲೇ ಚಂದನವನದಿಂದ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಕನ್ನಡಿಗರಿಂದ ಛೀಮಾರಿ ಹಾಕಿಸಿಕೊಂಡ ರಶ್ಮಿಕಾಳನ್ನು ಇದೀಗ ಬಾಲಿವುಡ್ ಮಂದಿ ಮೆಚ್ಚಿಕೊಂಡಿದ್ದಾರೆ. ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಕ್ರಿಕೆಟರ್ ಆಗಿ ಕಾಣಿಸಿಕೊಂಡಿರುವ ರಶ್ಮಿಕಾರ ನಟನೆಗೆ  ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಮನಸೋತಿದ್ದಾರಂತೆ. ಹಾಗಾಗಿ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದೆ. ಅದರ ಹಿಂದೆಯೇ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಸಿನಿಮಾ ಈಗ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದೆ. ಸಿನಿಮಾ ತೆರೆಕಾಣುವುದಕ್ಕೂ ಮೊದಲೇ ಚಿತ್ರದ ರಿಮೇಕ್ ಹಕ್ಕು ಮಾರಾಟವಾಗಿರುವುದು ವಿಶೇಷ.  ಆದರೆ ಈ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಅವರು ಬಹಿರಂಗವಾಗಿಲ್ಲ.

ಈ ಬಗ್ಗೆ ಟ್ವಿಟ್‌ರನಲ್ಲಿ ಬರೆದುಕೊಂಡಿರುವ ಕರಣ್ ಇದು ಒಂದು ಅದ್ಬುತ ಪ್ರೇಮ ಕಥೆ. ಸಂಗೀತ ತುಂಬ ಉತ್ತಮವಾಗಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯ ಉತ್ತಮವಾಗಿದೆ. ಧರ್ಮ ಮೂವಿಸ್ ಈ ಚಿತ್ರವನ್ನು ರಿಮೇಕ್ ಮಾಡುತ್ತಿದೆ ಎಂದಿದ್ದಾರೆ. ಇದಕ್ಕೆ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಸಂತಸ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.

ಇದರ ಮಧ್ಯೆ  ರಶ್ಮಿಕಾರ ಹೊಸ ಪೋಟೋಶೂಟ್‌ನಲ್ಲಿ ಮತ್ತೆ ಸಕತ್‌ಗೆ ಪೋಸ್ ಕೊಟ್ಟಿರುವ ಪೋಟೋಗಳು ಫುಲ್ ವೈರಲ್ ಆಗಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಡಿಸೈನರ್ ವೇರ್ ಸಂಸ್ಥೆಯೊಂದಕ್ಕೆ ನಡೆಸಿರುವ ಹೊಸ ಫೋಟೋಶೂಟ್‌ಗೆ ಮುದ್ದಾಗಿ ಪೋಸ್ ನೀಡುವ ಮೂಲಕ ಇನ್ನಷ್ಟು ಆಕರ್ಷಿಸಿದ್ದಾರೆ.

Leave a Comment