ರವಿಶಾಸ್ತ್ರಿ ಸಂಬಳ ನಿಗದಿಗೆ ಸಮಿತಿ!

ಮುಂಬೈ, ಜು. 16- ರವಿಶಾಸ್ತ್ರಿ ಸಂಬಳವೆ ನಿಗದಿಯಾಗಿಲ್ಲ.  ಅದನ್ನು ನಿಗದಿ ಮಾಡುವುದಕ್ಕೆಂದೇ ಸುಪ್ರೀಂಕೋರ್ಟ್ ನಿಯಮಿತ ಆಡಳಿತ ಮಂಡಳಿ ನಾಲ್ವರು ಸದಸ್ಯರ ಸಮಿತಿ ರಚಿಸಿದೆ!

ಈ ಸಮಿತಿ ರವಿಶಾಸ್ತ್ರಿ ವೇತನ ನಿಗದಿಪಡಿಸಲಿದೆ. ಇಷ್ಟೆಲ್ಲಾ ಸರ್ಕಸ್ ಯಾಕೆಂದರೆ, ಬಿಸಿಸಿಐ ಮೇಲೆ ಸುಪ್ರೀಂಕೋರ್ಟ್ ಲೋಧಾ ಸಮಿತಿಯ ವರದಿಯಂತೆ ಕೆಲವು ಆರ್ಥಿಕ ನಿರ್ಬಂಧ ವಿಧಿಸಿರುವುದು. ಹಾಗಾಗಿಯೇ ಎಲ್ಲಾ ನೀತಿನಿಯಮಾವಳಿಗಳ ಅನುಸಾರವೇ ಟೀಂ ಇಂಡಿಯಾದ ನೂತನ ಕೋಚ್‌ಗೆ ಸಂಬಳ ನಿಗದಿಯಾಗಲಿದೆ.

Leave a Comment