ರಮೇಶ್ ಕಾರಿನಲ್ಲಿ ‘ಡೆತ್ ನೋಟ್’ ಲಭ್ಯ

ಬೆಂಗಳೂರು : ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಸಾಯಿ ಗ್ರೌಂಡ್ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪರಮೇಶ್ವರ್ ಪಿಎ ರಮೇಶ್ ಕಾರಿನಲ್ಲಿ ಆತ್ಮಹತ್ಯೆಗೂ ಮುನ್ನಾ ಬರೆದು ಇಟ್ಟಿರುವ ಡೆತ್ ನೋಟ್ ಪೊಲೀಸರಿಗೆ ಲಭ್ಯವಾಗಿದೆ.
ಪರಮೇಶ್ವರ್ ಪಿಎಂ ಐಟಿ ದಾಳಿಯ ವಿಚಾರಣೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾದ ರಮೇಶ್ ಅವರ ಕಾರಿನಲ್ಲಿ ಇದೀಗ ಡೆಟ್ ನೋಟ್ ಪೊಲೀಸರಿಗೆ ಲಭ್ಯವಾಗಿದೆ. ರಮೇಶ್ ಆತ್ಮಹತ್ಯೆಗೂ ಮುನ್ನಾ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಾವು ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ನೂ ಮುಂದುವರೆದು ಪರಮೇಶ್ವರ್ ಪಿಎ ರಮೇಶ್ ಬರೆದಿರುವ ಪತ್ನಿಗೆ ತನ್ನನ್ನು ಕ್ಷಮಿಸಿ ಬಿಡುವಂತೆ ಕೋರಿಕೊಂಡಿದ್ದಾರೆ. ಜೊತೆಗೆ ತಾನು ಐಟಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ. ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಪತ್ನಿಯನ್ನು ಕೋರಿಕೊಂಡಿರುವುದಾಗಿ ಡೆತ್ ನೋಟ್ ನಿಂದ ತಿಳಿದು ಬಂದಿದೆ.

Leave a Comment