ರಮೇಶ್ ಆತ್ಮಹತ್ಯೆ’ಗೆ ‘ಐಟಿ ಅಧಿಕಾರಿ’ಗಳೇ ಹೊಣೆ – ಸಿದ್ದರಾಮಯ್ಯ

ಬೆಂಗಳೂರು : ಎರಡು ದಿನಗಳ ಕಾಲ ಪರಮೇಶ್ವರ್ ನಿವಾಸ, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಆಧಿಕಾರಿಗಳ ದಾಳಿಯ ವೇಳೆ ವಿಚಾರಣೆ ನೆಪದಲ್ಲಿ ಪರಮೇಶ್ವರ್ ಪಿಎ ರಮೇಶ್ ಗೆ ಐಟಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಇದೇ ಕಾರಣದಿಂದಾಗಿ ಬೇಸತ್ತು ಆತ್ಮಹತ್ಯೆಗೆ ರಮೇಶ್ ಶರಣಾಗಿದ್ದಾರೆ. ಇದಕ್ಕೆ ಐಟಿ ಅಧಿಕಾರಿಗಳೇ ಹೊಣೆಗಾರರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಿಧಾನಸೌಧದ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಮೂರು ದಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ವಿಚಾರಣೆ ಮಾಡುವಾಗ ಕಿರುಕುಳ ಕೊಟ್ರು. ಇಂತಹ ಕಿರುಕುಳ ತಡೆದುಕೊಳ್ಳಲಾರದೇ ನಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪರಮೇಶ್ವರ್ ಪಿಎಂ ಆತ್ಮಹತ್ಯೆಗೂ ಮುನ್ನಾ ವಿಚಾರ ತಿಳಿದು ಬಂದಿದೆ. ಇದು ನಿಜವೇ ಆಗಿದ್ದರೇ, ಅವರ ಸಾವಿಗೆ ಐಟಿ ಅಧಿಕಾರಿಗಳೇ ಹೊಣೆ ಎಂದು ಐಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ನಾನು ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ವಿರೋಧವಿಲ್ಲ. ಆದ್ರೇ ಕಾಂಗ್ರೆಸ್ ನವರನ್ನೇ ಟಾರ್ಗೆಟ್ ಮಾಡಿಕೊಂಡು, ರಾಜಕೀಯ ದ್ವೇಷದಿಂದ ಐಟಿ ಅಧಿಕಾರಿಗಳಿಂದ ದಾಳಿ ಮಾಡಿಸುತ್ತಾ ಇರೋದು ಸರಿಯಲ್ಲ. ಎಲ್ಲರ ಮೇಲೆಯೂ ಮಾಡಲಿ. ಏನ್ ಬಿಜೆಪಿಯವರಲ್ಲಿ ದುಡ್ಡು ಇರೋರು ಇಲ್ಲವಾ.? ಮೆಡಿಕಲ್ ಕಾಲೇಜು ನೆಡೆಸೋರು ಇಲ್ವಾ.? ಶಿಕ್ಷಣ ಸಂಸ್ಥೆಗಳನ್ನು ನಡೆಸ್ತಾ ಇರೋರು ಇಲ್ವಾ.? ಬರೀ ಕಾಂಗ್ರೆಸ್ ನವರು ಮಾತ್ರನಾ ಇರೋದು.? ಅವರ ಮೇಲೂ ಮಾಡಲಿ, ಇವರ ಮೇಲೆಯೂ ಮಾಡಲಿ ಎಂದು ಹೇಳಿದ್ರು.
ನಾನು ಪರಮೇಶ್ವರ್ ಪಿಎಂ ರಮೇಶ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲಿ ಎಂದು ಕೋರಿಕೊಳ್ಳುತ್ತೇನೆ. ನಾನು ಮತ್ತೊಮ್ಮ ಹೇಳುತ್ತೇನೆ ರಮೇಶ್ ಅವರ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ. ಈ ಸಾವಿಗೆ ಐಟಿ ಅಧಿಕಾರಿಗಳೇ ಹೊಣೆ ಎಂದು ತಿಳಿಸಿದರು

Leave a Comment