ರಫೇಲ್ ವ್ಯವಹಾರ ಪ್ರತಿಯೊಬ್ಬ ಭಾರತೀಯನು ಮೋದಿ ಪ್ರಶ್ನಿಸಲಿ : ರಾಹುಲ್

ನವದೆಹಲಿ, ಜ.೫- ರಫೇಲ್ ಜೆಟ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ತಾವು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳನ್ನು ಪ್ರತಿಯೊಬ್ಬ ಭಾರತೀಯನೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೇಳಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳುವುದರೊಂದಿಗೆ ರಾಹುಲ್ ತಮ್ಮ ಆಕ್ರಮಣವನ್ನು ಮತ್ತಷ್ಟು ತೀವ್ರ ಗೊಳಿಸಿದ್ದಾರೆ.
“ರಕ್ಷಣಾ ಸಚಿವರು (ನಿರ್ಮಲಾ ಸೀತಾರಾಮನ್) ಸಂಸತ್ತಿನಲ್ಲಿ 2 ಗಂಟೆಗಳ ಕಾಲ ಮಾತನಾಡಿದರು. ಆದರೆ ನಾನು ಕೇಳಿದ ಎರಡು ಸರಳವಾದ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ” ಎಂದವರು ಟ್ವೀಟ್ ಮಾಡಿದ್ದಾರೆ.
ರಫೇಲ್ ಗುತ್ತಿಗೆಯನ್ನು ಅನಿಲ್ ಅಂಬಾನಿಯವರಿಗೆ ನೀಡಿದಾಗ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಆಕ್ಷೇಪಿಸಿದ್ದರೋ ಇಲ್ಲವೋ ? ಎಂದು ಪ್ರಶ್ನಿಸಿದ್ದ ರಾಹುಲ್ ಅದನ್ನು ವಿಡಿಯೋ ಮಾಡಿ ಹಾಕಿದ್ದು, ಎಲ್ಲರೂ ಇದನ್ನು ಶೇರ್ ಮಾಡಿ, ಪ್ರತಿಯೊಬ್ಬರೂ ಈ ಪ್ರಶ್ನೆಯನ್ನು ಪ್ರಧಾನಿಯವರಿಗೆ ಕೇಳಬೇಕು ಎಂದು ಕೋರಿದ್ದು, ನನ್ನ ಈ ಪ್ರಶ್ನೆಗೆ ರಕ್ಷಣಾ ಸಚಿವರು ಹೌದ ಅಥವಾ ಇಲ್ಲ ಎಂದು ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
ಗಾಂಧಿ ಇದಕ್ಕೆ “ಎರಡು ಪ್ರಶ್ನೆ, ಎರಡು ಉತ್ತರ” ಎಂಬ ಶಿರೋನಾಮೆ ನೀಡಿದ್ದಾರೆ.

Leave a Comment