ರಥಸಪ್ತಮಿ: ತಿರುಮಲ ರಥೋತ್ಸವ ಕಣ್ತುಂಬಿಕೊಂಡ ಭಕ್ತರು

 

 

ತಿರುಮಲ, ಫೆ 12- ರಥಸಪ್ತಮಿಯ   ಪುಣ್ಯದಿನವಾದ ಇಂದು ತಿರುಪತಿ ತಿರುಮಲದಲ್ಲಿ ವಿವಿಧ ಉತ್ಸವಗಳು ಜರುಗಿದ್ದು, ಲಕ್ಷಾಂತರ   ಯಾತ್ರಿಕರು ಪಾಲ್ಗೊಂಡಿದ್ದರು.

 

ಬೆಳಗಿನ ಜಾವ 5,30ಕ್ಕೆ ಸೂರ್ಯ ನಾರಾಯಣ   ರಥೋತ್ಸವ ಜರುಗಿದ್ದು, 6.57ರ ವೇಳೆ ಸೂರ್ಯನ ಕಿರಣಗಳು ರಥದಲ್ಲಿದ್ದ ಮೂರ್ತಿಯ ಪಾದ, ಎದೆ,   ಹಣೆಯ ಭಾಗಗಳನ್ನು ಬೆಳಗಿದ್ದನ್ನು ಯಾತ್ರಿಕರು ಕಣ್ತುಂಬಿಕೊಂಡರು. 5 ಗಂಟೆಯ ಸುಮಾರಿಗೆ ಎಲ್ಲ   175 ಗ್ಯಾಲರಿಗಳೂ ಭಕ್ತರಿಂದ ತುಂಬಿಹೋಗಿತ್ತು.

 

ಯಾತ್ರಿಕರಿಗೆ ಅನ್ನಪ್ರಸಾದ, ನೀರು ಮೊದಲಾದ   ಸೌಲಭ್ಯ ಒದಗಿಸಲು ಟಿಟಿಡಿ ವತಿಯಿಂದ 2 ಸಾವಿರ ಸೇವಕರು ಹಾಗೂ 1 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್    ಗಳನ್ನು ನೇಮಿಸಲಾಗಿದೆ.

 

ಶ್ರೀ ಮಲಯಪ್ಪ ಸ್ವಾಮಿಯ 7 ವಾಹನಗಳ ರಥೋತ್ಸವ   ದಿನವಿಡಿ ಜರುಗಲಿದ್ದು ಬೆಳಗ್ಗೆ 5.30ರಿಂದ 8ರ ವರೆಗೆ ಸೂರ್ಯ ಪ್ರಭಾ, 9 ರಿಂದ 10ರ ವರೆಗೆ   ಚಿನ್ನ ಶೇಷ, 11 ರಿಂದ 12ರ ವರೆಗೆ ಗರುಡ ವಾಹನ, 1 ರಿಂದ 2 ಗಂಟೆಯವರೆಗೆ ಹನುಮಂತ   ವಾಹನೋತ್ಸವಗಳು ಜರುಗಿವೆ ಮಧ್ಯಾಹ್ನ 2 ರಿಂದ 3 ಗಂಟೆಯೊಳಗೆ ಚಕ್ರ ಸ್ನಾನ ನೆರವೇರಲಿದೆ.

 

ಸಂಜೆ 4 ರಿಂದ 5 ಕಲ್ಪವೃಕ್ಷ,  6 ರಿಂದ 7 ಸರ್ವಭೂಪಾಲ,   8ರಿಂದ 9 ಗಂಟೆಯವರೆಗೆ ಚಂದ್ರಪ್ರಭಾ ವಾಹನೋತ್ಸವ ನಡೆಯಲಿದೆ.

 

ಟಿಟಿಡಿಯ ಕಾರ್ಯನಿರ್ವಹಣಾಧಿಕಾರಿ ಅನಿಲ್   ಕುಮಾರ್ ಸಿಂಘಾಲ್, ಜಂಟಿ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಶ್ರೀನಿವಾಸ ರಾಜು ಮತ್ತು   ಮುಖ್ಯಸ್ಥ ವಿಗಿಲಾ ಅವರು ಎಲ್ಲ ಉತ್ಸವಗಳೂ ಸುಸೂತ್ರವಾಗಿ ನೆರವೇರಲು ಬೇಕಾದ ಕ್ರಮಗಳನ್ನು   ಕೈಗೊಂಡಿದ್ದಾರೆ.

 

Leave a Comment