ರಣಬೀರ್- ಆಲಿಯಾ ಮಧ್ಯೆ ಬಿರುಕು

ಮುಂಬೈ, ಜ ೨೬- ಮತ್ತೊಂದು ಮದುವೆ ಸಂಭ್ರಮದಲ್ಲಿದ್ದ ಬಾಲಿವುಡ್‌ನಲ್ಲಿ ಬ್ರೇಕ್ ಸುದ್ದಿಯೊಂದು ಕೇಳಿ ಬಂದಿದೆ. ಹೌದು  ಖ್ಯಾತ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎನ್ನಲಾಗಿದ್ದು,  ಈ ಸುದ್ದಿ ಈಗ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಯ ವಿಚಾರವಾಗಿದೆ.

ಈ ಜೋಡಿ ಮಧ್ಯೆ ಬಿರುಕು ಬಿಟ್ಟಿರುವುದರಿಂದ ಇತಿಹಾಸ ಮತ್ತೆ ಮರುಕಳಿಸುತ್ತದೆ ಎಂಬ ಸುದ್ದಿ ಈಗ ಎಲ್ಲೆಡೆ ದಟ್ಟವಾಗಿ ಹರಡುತ್ತಿದೆ. ಕಾರಣ ಈ ಹಿಂದೆ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದಾಗಲೂ ರಣಬೀರ್ ಕೆಲ ಮನಸ್ತಾಪಗಳಿಂದ ದೂರವಾಗಿದ್ದರು. ಇದಕ್ಕೆ ಮುಖ್ಯ ಕಾರಣ ಏಕಾಂತವನ್ನು ರಣಬೀರ್ ಬಯಸುತ್ತಾರೆ.

ಅಂದರೆ ಯಾವಾಗಲೂ ಪ್ರೇಯಸಿಗೆ ಕರೆ ಮಾಡುವುದು, ಸಂದೇಶವನ್ನು ಕಳುಹಿಸುವುದು ರಣಬೀರ್‌ಗೆ ಇಷ್ಟವಾಗುವುದಿಲ್ಲ. ಆಯಾ ವ್ಯಕ್ತಿಗಳಿಗೆ ಅವರದ್ದೇ ಆದ ಸ್ವಾತಂತ್ರ್ಯ ಇರುತ್ತದೆ ಎಂಬುದು ರಣಬೀರ್ ನಂಬಿಕೆ. ಈಗ ಆಲಿಯಾ ಭಟ್ ವಿಷಯದಲ್ಲೂ ಇದೇ ಆಗುತ್ತಿದೆ. ಆಕೆಗೆ ಯಾವಾಗ ಅಂದರೆ ಆವಾಗ ಕರೆ ಮಾಡಲು ಆಗುತ್ತಿಲ್ಲ. ಹೆಚ್ಚಿನ ಸಮಯ ಮೀಸಲಿಡಲು ಕಷ್ಟವಾಗುತ್ತಿದೆ. ಆದರೆ ಆಲಿಯಾ ತನ್ನ ಪ್ರಿಯಕರ ಇದೆಲ್ಲವನ್ನೂ ಮಾಡಬೇಕೆಂಬ ಅಭಿಲಾಷೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.

Leave a Comment