ರಡ್ಡೇರ ಪತ್ತಿನ ಸೌಹಾರ್ದ ಸಂಘ : ನೂತನ ಕಟ್ಟಡ ಉದ್ಘಾಟನೆ

ಲಿಂಗಸೂಗೂರು.ಜು.14- ರಡ್ಡೇರ ಪತ್ತಿನ ಸೌಹಾರ್ದ ಸಹಕಾರಿ ನಿ.ಲಿಂಗಸೂಗೂರು ದಶಮಾನೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆಯನ್ನು ಗುರುಶಾಂತ ಶಿವಾಚಾರ್ಯ ಮಹಾಸ್ವಾಮಿಗಳು ಗವಿಮಠ ಬೊಮ್ಮನಹಳ್ಳಿ, ಸಂತೆ ಕೆಲ್ಲೂರಿನ ಗುರುಬಸವ ಮಹಾಸ್ವಾಮಿಗಳು ಘನಮಠೇಶ್ವರ ಮಠ ಇವರು ಉದ್ಘಾಟಿಸಿದರು.
ರಡ್ಡೇರ ಪತ್ತಿನ ಸೌಹಾರ್ದ ಸಹಕಾರಿ ಸಂಘ ಶಾಖೆಗಳು ಮಸ್ಕಿ, ಗಾಂಧಿನಗರ, ಹುಣಸಿಗಿ, ನಾಗರಾಳ, ಮುದುಗಲ್‌ನಲ್ಲೂ ಕಾರ್ಯನಿರ್ವಹಿಸುತ್ತಿವೆ. ಕಳೆದ ಒಂದು ದಶಕದಿಂದ ಸಾರ್ವಜನಿಕ ಸೇವೆಯಲ್ಲಿ ಪತ್ತಿನ ಸಹಕಾರಿ ಸಂಘದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನರ ವಿಶ್ವಾಸದೊಂದಿಗೆ ಸಹಕಾರಿ ಸಂಘ ಕಳೆದ ಹತ್ತು ವರ್ಷಗಳಿಂದ ಆರ್ಥಿಕ ಕ್ಷೇತ್ರದಲ್ಲಿ ವಿಶ್ವಾಸ ಅರ್ಹತೆಯೊಂದಿಗೆ ಜವಾಬ್ದಾರಿ ನಿರ್ವಹಿಸಿಕೊಂಡಿದೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಹೆಚ್.ಕುಮಾರಪ್ಪ, ಪ್ರಜಾಪಿತ ಬ್ರಹ್ಮ ಕುಮಾರಿಯ ವನಜಾಕ್ಷಿ ಅಕ್ಕ, ಡಾ.ಎನ್.ಎಲ್. ನಡುವಿನ ಮನಿ, ಕೆ.ಅಮರೇಗೌಡ, ಸುರೇಶಗೌಡ, ಸಹಕಾರಿ ಒಕ್ಕೂಟದ ನಿರ್ದೇಶಕ ಶೇಖರಗೌಡ ಪಾಟೀಲ್, ಬಸವರಾಜಪ್ಪ ಕರೇಕಲ್ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Comment