ರಜನೀಕಾಂತ್ ವಿರುದ್ಧ ಪ್ರತಿಭಟನೆ: ನಟನ ನಿವಾಸಕ್ಕೆ ಮೂರು ಸ್ತರದ ಭದ್ರತೆ

ಚೆನ್ನೈ, ಜ 22- ವಿಚಾರವಾದ ನಾಯಕ ಪೆರಿಯಾರ್ ವಿರುದ್ಧ ಹೇಳಿಕೆ ನೀಡಿರುವ ರಜನೀಕಾಂತ್ ಕ್ಷಮೆ ಕೋರಬೇಕೆಂದು ಒತ್ತಾಯಿಸಿ ದ್ರಾವಿಡ ಪರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದ ಪೊಯೀಸ್ ಗಾರ್ಡನ್ ನಲ್ಲಿರುವ ನಟನ ನಿವಾಸಕ್ಕೆ ಮೂರು ಸ್ಥರದ ಭದ್ರತೆ ಒದಗಿಸಲಾಗಿದೆ.
ಈ ಮಧ್ಯೆ, ಪೆರಿಯಾರ್ ದ್ರಾವಿಡ ಕಳಗಂ ಸದಸ್ಯರು ರಜನೀಕಾಂತ್ ನಿವಾಸಕ್ಕೆ ಒಂದು ಕಿ.ಮೀ ದೂರದ ಸೆಮ್ಮೊಳಿ ಪೂಂಗದಲ್ಲಿ ಜಮಾಯಿಸಿ, ರಜನೀಕಾಂತ್ ವಿರುದ್ಧ ಘೋಷಣೆಗಳನ್ನು ಕೂಗಿದರು.
1971ರಲ್ಲಿ ಸೇಲಂನಲ್ಲಿ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಶ್ರೀರಾಮ ಮತ್ತು ಸೀತೆಯ ಮೂರ್ತಿಗಳಿಗೆ ಚಪ್ಪಲಿ ಹಾರ ಹಾಕಿರುವ ಕುರಿತಂತೆ ನೀಡಿರುವ ಹೇಳಿಕೆಯನ್ನು ರಜನೀಕಾಂತ್ ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಫಲಕಗಳನ್ನು ಹಿಡಿದು ನಟನ ನಿವಾಸದತ್ತ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ರಜನೀಕಾಂತ್ ಕ್ಷಮೆ ಯಾಚಿಸುವವರೆಗೆ ಪ್ರತಿಭಟನೆಗಳು ಮುಂದುವರೆಯಲಿವೆ ಎಂದು ಪ್ರತಿಭಟನೆಕಾರರು ಹೇಳಿದ್ದಾರೆ.
ಹೇಳಿಕೆ ನೀಡಿರುವುದಕ್ಕೆ ತಾವು ವಿಷಾದ ವ್ಯಕ್ತಪಡಿಸುವುದಿಲ್ಲ. ಇಲ್ಲವೇ ಕ್ಷಮೆ ಯಾಚಿಸುವುದೂ ಇಲ್ಲ ಇಲ್ಲ ಎಂದು ರಜನೀಕಾಂತ್ ನಿನ್ನೆ ಹೇಳಿರುವುದನ್ನು ಇಲ್ಲಿ ಗಮನಿಸಬಹುದು.

Leave a Comment