ರಜನಿ ಪುತ್ರಿಯ ‘ವಿವಾಹ’ ಸಮಾರಂಭದಲ್ಲಿ ಕಾಜೋಲ್

ಮುಂಬೈ, ಫೆ ೧೨- ಬಾಲಿವುಡ್ ನಟಿ ಕಾಜೋಲ್, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿನ ಸಂಭ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

A vip wedding……wishing my sweet director a wonderful life ahead…..ಎಂದು ಫೋಟೋದೊಂದಿಗೆ ಕಾಜೋಲ್ ಶುಭ ಕೋರಿದ್ದಾರೆ.

ಸೌಂದರ್ಯ, ಸೋಮವಾರ ಚೆನ್ನೈನಲ್ಲಿ ವಿಶಾಗನ್ ವನಗಮುಡಿ ಅವರೊಂದಿಗೆ ಸಪ್ತಪದಿ ತುಳಿದರು. ಈ ಸಮಾರಂಭದಲ್ಲಿ ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೈಪ್ರೊಫೈಲ್ ಅತಿಥಿಗಳು ಪಾಲ್ಗೊಂಡಿದ್ದರು.

ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ, ನಟ ಕಮಲಹಾಸನ್, ಮೋಹನ್ ಬಾಬು, ಪ್ರಭು, ವಿಕ್ರಂ ಪ್ರಭು, ಅದಿತಿ ರಾವ್ ಹೈದರಿ, ಪಿ.ವಾಸು, ಕೆ.ಎಸ್ . ರವಿಕುಮಾರ್ ಸಮಾರಂಭದಲ್ಲಿ ಗಮನ ಸೆಳೆದರು.

ಇದು ಸೌಂದರ್ಯ ಅವರ ಎರಡನೇ ವಿವಾಹವಾಗಿದ್ದು, ಅವರು ಈ ಮುಂಚೆ ಕೈಗಾರಿಕೋದ್ಯಮಿ ಅಶ್ವಿನ್ ರಾಮಕುಮಾರ್ ಅವರೊಂದಿಗೆ ಏಳು ವರ್ಷ ಸಂಸಾರ ನಡೆಸಿದ್ದರು. 2016ರಲ್ಲಿ ಅವರಿಬ್ಬರ ನಡುವೆ ವಿವಾಹ ವಿಚ್ಛೇದನವಾಗಿತ್ತು.

Leave a Comment