ರಕ್ಷಿತ್ ಶೆಟ್ಟಿಗೆ ಮತ್ತೆ ಲವ್ ಆಗಿದ್ಯಾ?

ಬೆಂಗಳೂರು, ಡಿ ೧೧ -ಕನ್ನಡದ ಕಿರಿಕ್ ಪಾರ್ಟಿಯಲ್ಲಿ ನಟಿಸಿ, ಜನಪ್ರಿಯತೆ ಗಳಿಸಿದ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿಗೆ ಕೈಕೊಟ್ಟು ಪರಭಾಷೆಗಳಲ್ಲಿ ಬ್ಯುಸಿಯಾಗಿರುವ ವಿಷಯ ಹಳೆಯದಾಯಿತು

ಈಗ ಹೊಸದಾಗಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ಕೈ ಕೊಟ್ಟ ರಶ್ಮಿಕಾಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಟ್ಟ ರಕ್ಷಿತ್ ಶೆಟ್ಟಿಗೆ ಮತ್ತೊಬ್ಬ ಸ್ಟಾರ್ ನಟಿ ಜೊತೆ ಮದುವೆಯಾಗಲಿದೆ ಎಂಬ ಗುಲ್ಲು ಹಬ್ಬಿದೆ.

ರಕ್ಷಿತ್ ಶೆಟ್ಟಿ ಅವರ ಚಿತ್ರ ಶ್ರೀಮನ್ ನಾರಾಯಣ ಇದೇ ಡಿಸೆಂಬರ್ ೨೦ರಂದು ರಿಲೀಸ್ ಆಗುತ್ತಿದೆ ಇದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಮತ್ತು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಈ ಸಿನಿಮಾದ ಟ್ರೈಲರ್ ತುಂಬಾ ಚೆನ್ನಾಗಿದೆ ಈ ಹಿಂದೆ ರಕ್ಷಿತ್ ಶೆಟ್ಟಿ ಅವರಿಗೆ ರಶ್ಮಿಕಾ ಜೊತೆ ಎಂಗೇಜ್ಮೆಂಟ್ ಆಯಿತು ಆದರೆ ಕಾರಣಾಂತರಗಳಿಂದ ಎಂಗೇಜ್ಮೆಂಟ್ ಮುರಿದು ಹೋಯಿತು

ಈಗ ಕೇಳಿಬರುತ್ತಿರುವ ಸುದ್ದಿ ಏನಪ್ಪಾ ಅಂದರೆ ರಕ್ಷಿತ್ ಶೆಟ್ಟಿ ಅವರು ಇನ್ನೊಬ್ಬ ನಾಯಕಿಯನ್ನು ಲವ್ ಮಾಡುತ್ತಿದ್ದಾರೆ ಮತ್ತು ಅವರನ್ನು ಮದುವೆಯಾಗುತ್ತಿದ್ದಾರೆ ಎಂಬುದು.

ಹಾಗಾದರೆ ಆ ನಾಯಕಿ ಯಾರು ಗೊತ್ತಾ ಅವರು ಬೇರೆ ಯಾರೂ ಅಲ್ಲ ಶ್ರೀಮನ್ ನಾರಾಯಣ ಚಿತ್ರನಟಿ ಶಾನ್ವಿ ಶ್ರೀವಾತ್ಸವ್. ಇವರ ಜೊತೆ ರಕ್ಷಿತ್ ಶೆಟ್ಟಿ ಮದುವೆ ಆಗಲಿದ್ದಾರೆ ಎಂದು ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೇಗ ಮದುವೆಯಾಗಿ ಎಂಗೇಜ್ಮೆಂಟ್ ಬೇಡ ಎಂದು ಹೇಳುತ್ತಿದ್ದಾರೆ ಅಭಿಮಾನಿಗಳು!

Leave a Comment