ರಕ್ಷಾಬಂಧನದ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ಷೇಪ!

ಮಂಗಳೂರು, ಆ.೧೩- ಕಾಲೇಜಿನಲ್ಲಿ ಹುಡುಗರಿಂದ ರಾಖಿ ಕಟ್ಟಿಸಿಕೊಂಡಿದ್ದ ವಿದ್ಯಾರ್ಥಿನಿಯರಿಗೆ ಫೇಸ್‌ಬುಕ್‌ನ ಪೇಜ್‌ವೊಂದರಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದು ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ಮಂಗಳೂರು ಮುಸ್ಲಿಮ್ಸ್ ಪೇಜ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ಕೂಗು ಇದೀಗ ಬಲವಾಗಿ ಕೇಳಿ ಬಂದಿದೆ.
ಸಹೋದರತೆಯ ಭ್ರಾತೃತ್ವ ಸಾರುವ ರಕ್ಷಾಬಂಧನ ಕಾರ್ಯಕ್ರಮ ಆ.೭ರಂದು ದೇಶಾದ್ಯಂತ ನಡೆದಿತ್ತು. ಕಾಲೇಂಜೊಂದರ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಯುವಕರು ರಾಖಿ ಕಟ್ಟುವ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಮಂಗಳೂರು ಮುಸ್ಲಿಮ್ಸ್ ಎನ್ನುವ ಫೇಸ್‌ಬುಕ್ ಪೇಜ್‌ವೊಂದರಲ್ಲಿ ರಕ್ಷಾಬಂಧನದ ಬಗ್ಗೆ ಆಕ್ಷೇಪಾರ್ಹ ಸಂದೇಶವೊಂದು ಪ್ರಕಟವಾಗಿದೆ. ಲೌಕಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಎತ್ತ ಸಾಗುತ್ತಿದ್ದಾರೆ? ಇಸ್ಲಾಂ ಕಲಿಸಿದ ತತ್ವಾದರ್ಶ ಗಾಳಿಗೆ ತೂರಿ ಹಿಂದೂ ಯುವಕರ ಮುಂದೆ ಕೈ ಚಾಚಿ ರಾಖಿ ಕಟ್ಟಿಸಿಕೊಳ್ಳುವ ಇವರು ಮುಸ್ಲಿಮರೇ?! ಎಂದು ಪ್ರಶ್ನಿಸಲಾಗಿದೆ. ಆ ಯುವಕರು ಮುಸ್ಲಿಂ ಯುವತಿಯರ ಕೈಗೆ ರಾಖಿ ಕಟ್ಟುವ ಅವಶ್ಯಕತೆಯಾದರು ಏನಿದೆ? ಇವರಿಗೆ ರಾಖಿ ಕಟ್ಟಲು ಹಿಂದೂ ಯುವತಿಯರು ಇಲ್ಲವೇ? ಎಂದು ಟೀಕಿಸಿದ್ದು, ಹಿಂದೂಗಳು ರಾಖಿ ಕಟ್ಟುತ್ತೇವೆಂದ ತಕ್ಷಣ ರಾಖಿ ಕಟ್ಟಿಸಿಕೊಂಡಿರುವ ಇವರಿಗೆ ಕನಿಷ್ಠ ತಾವು ಮುಸ್ಲಿಂ ಅನ್ನುವ ಮಾನಸಿಕ ಸ್ಥಿರತೆ ಇವರಲ್ಲಿ ಇದೆಯಾ? ಇವರೇನು ಮಾನಸಿಕ ಅಸ್ವಸ್ಥರೇ?! ಹೀಗೆ ಟೀಕಾ ಪ್ರಹಾರದ ಸಂದೇಶ ಆ.೧೦ರಂದು ಪ್ರಕಟವಾಗಿದೆ. ಇದೀಗ ಸಹೋದರ ಸಂಬಂಧ ಸಾರುವ ರಕ್ಷಾಬಂಧನ ಆಚರಿಸಿದ ವಿರುದ್ಧವೇ ಫೇಸ್‌ಬುಕ್‌ನಲ್ಲಿ ಆಕ್ಷೇಪಕಾರಿ ಬರಹ ಬರೆದಿರುವ ವಿರುದ್ಧ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

Leave a Comment