ರಕ್ತ ಹರಿಯಲಿದೆ ಎಂದಿದ್ದರು ರಾಹುಲ್, ಒಂದು ಗುಂಡು ಸಿಡಿದಿಲ್ಲ

 

ಮುಂಬೈ.ಅ.10.ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಪ್ರಸ್ತಾಪ ಮುಂದಿರಿಸಿದಾಗ ಕಾಂಗ್ರೆಸ್ ಮತ್ತು ಎನ್‌ಸಿಪಿ ವಿರೋಧ ಸೂಚಿಸಿ ಪ್ರತಿಭಟನೆ ನಡೆಸಿದ್ದವು. 370ನೇ ವಿಧಿ ರದ್ದು ಮಾಡಿರುವ ನಿರ್ಧಾರವನ್ನು ಮತ್ತು ಶರದ್ ಪವಾರ್ ವಿರೋಧಿಸಿದ್ದು ಯಾಕೆ ಎಂಬುದನ್ನು ಅವರು ಮಹಾರಾಷ್ಟ್ರದ ಜನರಿಗೆ ಹೇಳಲಿ ಎಂದಿದ್ದಾರೆ ಗೃಹ ಸಚಿವ .

ಮಹಾರಾಷ್ಟ್ರದ ಸಂಗ್ಲಿ ಜಿಲ್ಲೆಯ ಜಾಟ್‌ನಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಅಮಿತ್ ಶಾ 370ನೇ ವಿಧಿ ರದ್ಧತಿ ವಿರೋಧಿಸಿದ್ದ ಎನ್‌ಸಿಪಿ ಮತ್ತು ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ಮಾಡಿದ್ದಾರೆ.

ಈ ಎರಡು ಪಕ್ಷಗಳು ವೋಟ್ ಬ್ಯಾಂಕ್‌ಗಾಗಿ ದ ವಿಶೇಷಾಧಿಕಾರ ರದ್ದು ಮಾಡುವ ನಿರ್ಧಾರವನ್ನು ವಿರೋಧಿಸಿದ್ದರು. ಕಾಶ್ಮೀರ್ ಮೇ ಖೂನ್ ಕೀ ನದಿಯಾಂ ಬಹ್ ಜಾಯೇಗೀ (ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯಲಿದೆ) ಎಂದಿದ್ದರು ರಾಹುಲ್ ಗಾಂಧಿ. ಆದರೆ ಒಂದೇ ಒಂದು ಗುಂಡು ಹಾರಲಿಲ್ಲ.

ಪ್ರಧಾನಿಯವರು ಇತ್ತೀಚೆಗೆ ವಿಶ್ವಸಂಸ್ಥೆಗೆ ಭೇಟಿ ಕೊಟ್ಟು ಬಂದಿದ್ದರು. ಸಂವಿಧಾನದ 370ನೇ ವಿಧಿ ರದ್ದು ಮಾಡಿದ ನಿರ್ಧಾರವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಪಾಕಿಸ್ತಾನ ಮಾತ್ರ ಮೂಲೆಗುಂಪಾಗಿದೆ ಎಂದು ಶಾ ಹೇಳಿದ್ದಾರೆ.

ಮೋದಿಯವರ ನೇತೃತ್ವದ ಸರ್ಕಾರದಲ್ಲಿ ದೇಶದ ಭದ್ರತೆ ಬಲಗೊಂಡಿದೆ. ಇದು ಇಡೀ ಜಗತ್ತಿಗೇ ಗೊತ್ತು. ಒಬ್ಬ ಯೋಧ ಹುತಾತ್ಮನಾದರೆ 10 ಶತ್ರುಗಳ ಹತ್ಯೆಯಾಗುತ್ತದೆ ಎಂದು ಪುಲ್ವಾಮ ಉಗ್ರ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್ ವಾಯುದಾಳಿ ನಡೆದದ್ದನ್ನು ಶಾ ಉಲ್ಲೇಖಿಸಿದ್ದಾರೆ.
1971ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಯುದ್ಧ ಗೆದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮೊದಲು ಅಭಿನಂದಿಸಿದ್ದು ಅಟಲ್ ಬಿಹಾರಿ ವಾಜಪೇಯಿ. ನಾವು ಆಗ ವಿಪಕ್ಷದಲ್ಲಿದ್ದೆವು. ಯಾಕೆಂದರೆ ನಮಗೆ ದೇಶ ಮೊದಲು.

ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದ ಉಗ್ರರು ಗಡಿಯೊಳಗೆ ನುಗ್ಗಿ ನಮ್ಮ ಯೋಧರನ್ನು ಹತ್ಯೆ ಮಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಕ್ಷಣೆ ಬಗ್ಗೆ ಹೆಚ್ಚು ಗಮನ ಹರಿಸಿದರು ಎಂದು ಅಮಿತ್ ಶಾ ಹೇಳಿದ್ದಾರೆ.

Leave a Comment