ರಕ್ತ ಸಂಬಂಧದಲ್ಲಿ ಮದುವೆ: ಸರಿಯೇ, ತಪ್ಪೇ..?

ರಕ್ತ ಸಂಬಂಧಿಗಳಲ್ಲಿ ಅಂದರೆ ಅಕ್ಕನ ಮಕ್ಕಳು, ತಾಯಿಯ ಅಣ್ಣ, ತಮ್ಮಂದಿರ ಮಕ್ಕಳು, ತಂದೆಯ ತಂಗಿ ಅಥವಾ ಅಕ್ಕನ ಮಕ್ಕಳನ್ನು ವಿವಾಹವಾಗುವುದರಿಂದ ದೈಹಿಕ ನ್ಯೂನ್ಯತೆಯ ಮಕ್ಕಳು ಜನಿಸುತ್ತಾರೆ ಎಂಬ ಕಾರಣಕ್ಕೆ ಇಂತಹ ಮದುವೆ ಬೇಡ ಎಂದು ಹೇಳಲಾಗುತ್ತದೆ. ಆದರೆ ವಿಜ್ಞಾನಿಗಳ ಪ್ರಕಾರ ಇಂತಹ ಮದುವೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್ ಎಂಬ ವಿಜ್ಞಾನ ಪುಸ್ತಕದಲ್ಲಿ ರಕ್ತ ಸಂಬಂಧಿಗಳಲ್ಲಿ ಮದುವೆಯಾಗುವ ದಂಪತಿಗಳಿಗೆ ಜನಿಸುವ ಮಕ್ಕಳ ನ್ಯೂನ್ಯತೆಯ ಸಂಭವನೀಯತೆ ಶೇ. 2 ರಷ್ಟು ಮಾತ್ರ ಇದೆ. ಆದರೆ 40 ವರ್ಷ ದಾಟಿದ ಮಹಿಳೆಯರಿಗೆ ಮಕ್ಕಳು ಜನಿಸಿದರೆ ದೈಹಿಕ ನ್ಯೂನ್ಯತೆಯ ಸಂಭವನೀಯತೆ ಶೇ. 4.4 ರಷ್ಟು. ಹಾಗಾಗಿ ರಕ್ತ ಸಂಬಂಧಿಗಳ ವಿವಾಹಕ್ಕಿಂತ 40 ವರ್ಷ ದಾಟಿದ ನಂತರ ಮಕ್ಕಳಾಗುವುದರಿಂದ ಜನಿಸುವ ಮಕ್ಕಳಿಗೆ ಅಪಾರ ಜಾಸ್ತಿ ಎಂದು ವಿಜ್ಞಾನ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ.
ಹಿಂದೆ ಯುರೋಪ್ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಪುಲೀನ ಮನೆತನಗಳಲ್ಲಿ ಇಂಥ ವಿವಾಹಗಳು ಹೆಚ್ಚಾಗಿ ನಡೆಯುತ್ತಿದ್ದವು. ಪ್ರಖ್ಯಾತ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ತನ್ನ ಮಾವನ ಮಗಳನ್ನೆ ಮದುವೆಯಾಗಿದ್ದರು. ಇಂಥ ವಿವಾಹಗಳು ನಡೆಯುತ್ತವೇ ಇದ್ದವು. ಆದರೆ 19ನೇ ಶತಮಾನದ ನಂತರ ಈ ಚಿತ್ರಣ ಬದಲಾಯಿತು. ರಕ್ತ ಸಂಬಂಧಿಗಳಲ್ಲಿ ಜನಿಸುವ ಮಕ್ಕಳು ದೈಹಿಕ ನ್ಯೂನ್ಯತೆ ಹೊಂದುತ್ತಿದ್ದಾರೆ ಎಂಬ ಕಾರಣಕ್ಕೆ ಇಂತಹ ವಿವಾಹಗಳ ಸಂಖ್ಯೆ ಕಡಿಮೆಯಾಯಿತು ಎಂದು ಈ ಅಧ್ಯಯನ ವರದಿಗಳು ಹೇಳುತ್ತವೆ.
ಆದರೆ ವಿಜ್ಞಾನಿಗಳು ಹೇಳುವ ಪ್ರಕಾರ ರಕ್ತ ಸಂಬಂಧಿಗಳ ಮದುವೆಯಾಗುವವರಲ್ಲಿ ಜನಿಸುವ ಮಕ್ಕಳ ನ್ಯೂನ್ಯತೆಗಿಂತ 40 ವರ್ಷದ ನಂತರ ಮಕ್ಕಳು ಹುಟ್ಟಿದರೆ ದೈಹಿಕ ನ್ಯೂನ್ಯತೆ ಪ್ರಮಾಣ ಹೆಚ್ಚು. ಹಾಗಾಗಿ ರಕ್ತಸಂಬಂಧಿಗಳ ವಿವಾಹಕ್ಕಿಂತ 40 ವರ್ಷದ ನಂತರ ಮಕ್ಕಳು ಪಡೆಯುವುದು ಹೆಚ್ಚು ಅಪಾಯಕಾರಿ ಎಂಬ ವಾದವನ್ನು ಮಂಡಿಸಿದ್ದಾರೆ.
ಏನೇ ಆಗಲಿ, ರಕ್ತ ಸಂಬಂಧಿಗಳಲ್ಲಿ ಅಂದರ ಅಕ್ಕನ ಮಗಳು, ಮಾವನ ಮಕ್ಕಳು ಇವರನ್ನು ಮದುವೆಯಾದರೆ ಹುಟ್ಟುವ ಮಕ್ಕಳು ದೈಹಿಕ ನ್ಯೂನ್ಯತೆಯಿಂದ ಬಳಲುವ ಪ್ರಮಾಣ ಕಡಿಮೆ ಇದ್ದರೂ ಹುಟ್ಟುವ ಮಕ್ಕಳಿಗೆ ದೈಹಿಕ ನ್ಯೂನ್ಯತೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ದೈಹಿಕ ನ್ಯೂನ್ಯತೆಯ ಅಪಾಯಗಳು ಇದ್ದೇ ಇವೆ.

Leave a Comment