ರಕ್ತ ಗುಂಪು ಪರೀಕ್ಷಾ ಶಿಬಿರ

ತಿಪಟೂರು, ಆ. ೧೪- ಜಾಗೃತಿ ಸೇವಾ ಸಂಸ್ಥೆ ಹಾಗೂ ಅಮೃತ ಹಸ್ತ ಹೃದಯಸ್ವರ್ಶಿ ಸಹಾಯ ಸಂಘ ತಿಪಟೂರು ಮತ್ತು ಹಾಸನ ರಕ್ತ ನಿಧಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ಯ್ರ ದಿನಾಚರಣೆ ಅಂಗವಾಗಿ ಪಟ್ರೇಹಳ್ಳಿ ಹಾಗೂ ಚಿಕ್ಕಮಾರ್ಪನಹಳ್ಳಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ರಕ್ತ ಗುಂಪು ಪರೀಕ್ಷಾ ಶಿಬಿರ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷ ರೇಣುಕಾರಾಧ್ಯ, ಕಾರ್ಯದರ್ಶಿ ಪಾನ್‌ಕಾರ್ಡ್ ಹರೀಶ್, ಅಮೃತ ಹಸ್ತ ಹೃದಯಸ್ವರ್ಶಿ ಸಹಾಯ ಸಂಘದ ಸಂಸ್ಥಾಪಕ ಅಧ್ಯಕ್ಷ ಆನಂದ್‌ಕುಮಾರ್, ಚಿದಾನಂದಮೂರ್ತಿ, ಕಿರಣ್ ಮತ್ತಿತ್ತರು ಭಾಗವಹಿಸಿದ್ದರು.

ಶಿಬಿರದಲ್ಲಿ ಮೂನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು.

Leave a Comment