ರಕ್ತದಾನ ಶಿಬಿರ ಕಾರ್ಯಕ್ರಮ

ರಾಯಚೂರು.ನ.11- ರಾಣಾ ಫೌಂಡೇಷನ್ ಹಾಗೂ ಹಮ್‌ದರ್ದ್ ಟಾರಿ ಟೇಬಲ್ ಟ್ರಸ್ಟ್ ವತಿಯಿಂದ ನಿನ್ನೆ ಈದ್-ಮಿಲಾದ್-ಉನ್-ನಬಿ ಅಂಗವಾಗಿ ರಕ್ತದಾನ ಶಿಬಿರ ನಡೆಸಲಾಯಿತು.
ನಗರದ ಹೆಚ್ಆರ್‌ಬಿ ಲೇಔಟ್‌ನಲ್ಲಿ ಈ ಶಿಬಿರ ನಿರ್ವಹಿಸಲಾಯಿತು. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಉದ್ಘಾಟಿಸಿದರು. ಈ ರಕ್ತದಾನ ಶಿಬಿರದಲ್ಲಿ ಅನೇಕರು ಪಾಲ್ಗೊಂಡಿದ್ದರು. ರಕ್ತದಾನ ಮಹಾದಾನವೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಯಂ ಸ್ಪೂರ್ತಿಯೊಂದಿಗೆ ರಾಣಾ ಫೌಂಡೇಷನ್ ಮತ್ತು ಟ್ರಸ್ಟ್ ಸದಸ್ಯರು ರಕ್ತದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

Leave a Comment