ರಕ್ತದಾನಕ್ಕೆ ಮೊದಲು ನಂತರ ಮಾಡಬೇಕಾದ ಕೆಲಸ

 

ರಕ್ತದಾನಕ್ಕೂ ಮೊದಲು ಈ ಬಗ್ಗೆ ನೀವು ರಕ್ತದಾನ ಮಹಾದಾನ ಎಂದು ಹೇಳಲಾಗುತ್ತದೆ. ರಕ್ತದಾನ ಮಾಡಿದರೆ ಅದರಿಂದ ಹಲವಾರು ಮಂದಿಯ ಪ್ರಾಣ ಕಾಪಾಡಬಹುದಾಗಿದೆ. ಪ್ರತಿಯೊಂದು ಕ್ಷಣವು ಯಾರಿಗಾದರೊಬ್ಬರಿಗೆ ರಕ್ತವು ಬೇಕಾಗಿರುವುದು. ಅದರಲ್ಲೂ ಪ್ರಮುಖವಾಗಿ ಶಸ್ತ್ರಚಿಕಿತ್ಸೆ, ಗಂಭೀರ ಗಾಯ ಮತ್ತು ದೀರ್ಘಕಾಲದ ಅನಾರೋಗ್ಯವಿದ್ದರೆ ಆಗ ರಕ್ತವು ಬೇಕಾಗಿರುವುದು

ರಕ್ತದಾನ ಮಾಡುವುದು ತುಂಬಾ ಸರಳ ಮತ್ತು ಇದು ಹಲವಾರು ಜನರ ಜೀವನದಲ್ಲಿ ಬದಲಾವಣೆಗಳನ್ನು ಬಿಡುಗಡೆ ಮಾಡುವುದು. ರಕ್ತದಾನ ಮಾಡಲು ನಿರ್ಧಾರ ಮಾಡಿದ್ದರೆ ಆಗ ನೀವು ರಕ್ತದಾನಕ್ಕೆ ಮೊದಲು, ಆ ವೇಳೆ ಮತ್ತು ಬಳಿಕ ಏನು ಮಾಡಬೇಕು

ರಕ್ತದಾನ ಮಾಡುವ ಕೆಲವು ವಾರಗಳಿಗೆ ಮೊದಲು ನೀವು ಕಬ್ಬಿನಾಂಶವು ಹೆಚ್ಚಾಗಿ ಇರುವಂತಹ ಆಹಾರಗಳಾಗಿರುವಂತಹ ಸಮುದ್ರಾಹಾರ, ಮಾಂಸ, ಬಸಳೆ, ಬೀನ್ಸ್ ಮತ್ತು ಗೆಣಸು ತಿನ್ನಬೇಕು. ಇದರಿಂದ ಕಡಿಮೆ ಹಿಮೋಗ್ಲೋಬಿನ್ ಮಟ್ಟದ ಅಪಾಯವು ತಪ್ಪುವುದು. ನಿಮ್ಮ ವೈದ್ಯಕೀಯ ಇತಿಹಾಸದ ಬಗ್ಗೆ ಮಾಹಿತಿ ಇರುವಂತಹ ಫಾರ್ಮ್ ಅನ್ನು ನೀವು ರಕ್ತದಾನಕ್ಕೆ ಮೊದಲು ತುಂಬಬೇಕು. ಇದರಲ್ಲಿ ರಕ್ತದಿಂದ ಬರುವಂತಹ ಯಾವುದೇ ಸೋಂಕು ಇದೆಯಾ ಎಂದು ನೋಡುವರು. ಅದೇ ರೀತಿಯಾಗಿ ಯಾವುದೇ ಔಷಧಿ ತೆಗೆದುಕೊಳ್ಳುತ್ತಲಿದ್ದರೆ ಮತ್ತು ಪೋಷಕಾಂಶದ ಕೊರತೆ ಇದ್ದರೆ ಆಗ ನೀವು ಇದನ್ನು ಹೇಳಬೇಕು. ರಕ್ತಹೀನತೆ ಮತ್ತು ರಕ್ತದೊತ್ತಡ ಇಲ್ಲದೆ ಇದ್ದರೆ ಆಗ ರಕ್ತದ ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತದೆ. ರಕ್ತದ ಸ್ಯಾಂಪಲ್ ಪಾಸಿಟಿವ್ ಆಗಿದ್ದರೆ ಆಗ ವೈದ್ಯರು ರಕ್ತದಾನಕ್ಕೆ ಅವಕಾಶ ನೀಡುವರು.

ರಕ್ತದಾನದ ಬಳಿಕ ಯಾವುದೇ ರೀತಿಯ ತುರಿಕೆ, ಊತ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ನೋವು ನಿವಾರಣೆ ಮಾಡಲು ಸ್ವಲ್ಪ ಸಮಯ ಕೈಯನ್ನು ಮೇಲಿನ ಭಾಗಕ್ಕೆ ಹಿಡಿದುಕೊಳ್ಳಿ. ಬೇಕಿದ್ದರೆ ಲಘು ಉಪಾಹಾರ ಮಾಡಬಹುದು ಮತ್ತು ಮುಂದಿನ ೨೪ ಗಂಟೆಗಳ ಕಾಲ ಯಾವುದೇ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಡಿ. ೨-೩ ವಾರಗಳ ಬಳಿಕ ರಕ್ತದ ಮಟ್ಟವು ಮತ್ತೆ ಅದೇ ಮಟ್ಟಕ್ಕೆ ಬರುವುದು. ರಕ್ತದಾನದ ಬಳಿಕ ಬೇಗನೆ ಚೇತರಿಕೆ ಪಡೆಯಲು ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ರಕ್ತದಾನದ ಬಳಿಕ  ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ,ಸಂತೋಷವಾಗಿರಿ ಮತ್ತು ಧನಾತ್ಮಕವಾಗಿರಿ.,ಆರಾಮದಾಯಕ ಬಟ್ಟೆ ಧರಿಸಿ., ನಿಶ್ಯಕ್ತಿ, ನೋವು ಕಾಣಿಸುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ. , ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ..

Leave a Comment