ರಂಜಾನ್ ಹಬ್ಬಕ್ಕೆ ಶುಭಕೋರಿದ “ರಾಬರ್ಟ್ “

ಬೆಂಗಳೂರು, ಮೇ 25 – ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಚಿತ್ರ ತಂಡ ರಂಜಾನ್ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಮುಸ್ಲಿಂ ಬಾಂಧವರಿಗೆ ಶುಭ ಕೋರಿದೆ.

ಕಳೆದ ಬಾರಿ ಚಿತ್ರ ತಂಡ ರಾಮ ನವಮಿಯ ನಿಮಿತ್ಯ ಜೈ ಶ್ರೀರಾಮ್ ಹಾಡಿನ ಹೊಸ ವರ್ಷನ್ ಜತೆಗೆ, ಚಿತ್ರದ ಒಂದು ಪೋಸ್ಟರ್ ವೊಂದು ನಿರ್ದೇಶಕರು ಬಿಡುಗಡೆ ಮಾಡಿದ್ದರು. ಇದೀಗ ರಂಜಾನ್ ಪ್ರಯುಕ್ತ ಇನ್ನೊಂದು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ದರ್ಶನ್ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.

ಪೋಸ್ಟರ್ ವೊಂದನ್ನು ದರ್ಶನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಎಲ್ಲಾ ನಲ್ಮೆಯ
ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ರಾಬರ್ಟ್ ಚಿತ್ರದ ಪೋಸ್ಟರ್ ನಿಮಗಾಗಿ. ಎಲ್ಲರ ಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಚಿತ್ರವೂ ನಿಮ್ಮ ಮಡಿಲಿಗೆ ಸೇರಲಿದೆ. ಮನೆಯಲ್ಲೇ ಇರಿ. ಮನೆಯವರಿಗಾಗಿ ಜಾಗೃತರಾಗಿರಿ ಎಂಬ ಸಂದೇಶವೊಂದನ್ನು ರವಾನಿಸಿದ್ದಾರೆ.

ರಾಬರ್ಟ್’ ಚಿತ್ರದಲ್ಲಿ ದರ್ಶನ್ ಜೊತೆಗೆ ಆಶಾ ಭಟ್ ಬಣ್ಣ ಹಚ್ಚಿದ್ದು, ಜಗಪತಿ ಬಾಬು, ವಿನೋದ್ ಪ್ರಭಾಕರ್ ಮುಂತಾದವರು ಚಿತ್ರದಲ್ಲಿದ್ದಾರೆ.

ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ಚಿತ್ರವನ್ನು ಉಮಾಪತಿ ಗೌಡ ನಿರ್ಮಿಸಿದ್ದಾರೆ. ಇನ್ನು, ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

Share

Leave a Comment