ರಂಜಾನ್ : ಮುಸ್ಲಿಂ ಬಾಂಧವರಿಗೆ ಭಾವೈಕ್ಯತೆಯ ನೆರವು

ಸಿಂಧನೂರು.ಮೆ.25- ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರಿಗೆ ಇಪ್ತಿಯಾರ ಕೂಟವನ್ನು ಏರ್ಪಡಿಸಲಾಗಿತ್ತು.
ನಗರದ ಯುವ ಕಾಂಗ್ರೆಸ್ ಕಛೇರಿಯಲ್ಲಿ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಮುಸ್ಲಿಂ ಸಮಾಜದ ಬಂಧುಗಳಿಗೆ ಸಾಮಾಜಿಕ ಅಂತರ ಕಾಪಾಡುವ ಮೂಲಕ ಇಪ್ತಿಯಾರ ಕೂಟ ಏರ್ಪಡಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಬಸನಗೌಡ ಬಾದರ್ಲಿ ಸಾಮಾಜಿಕ ಸೇವೆ ಮಾಡುವ ಮೂಲಕ ತಾಲೂಕಿನ ಜನತೆಯ ಪ್ರೀತಿ ವಿಶ್ವಾಸಗಳಿಸಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ರಂಗದಲ್ಲಿ ಎತ್ತರಕ್ಕೆ ಬೆಳೆಯಲಿ ಎಂದು ಮುಸ್ಲಿಂ ಸಮಾಜದ ಮೌಲಾನ್ ತಾಜಮುದ್ದಿನ್ ಮಾತನಾಡಿದರು.
ಲಾಕ್ ಡೌನ್ ಹಿನ್ನೆಯಲ್ಲಿ ಜನ ಹಸಿವಿನಿಂದ ಬಳಲದಂತೆ ನಿರಂತರವಾಗಿ ಇಲ್ಲಿ ತನಕ ಅನ್ನ ಹಾಗೂ ಆಹಾರ ಧಾನ್ಯಗಳನ್ನು ನೀಡುವ ಮೂಲಕ ನೊಂದವರಿಗೆ ಆಸರೆಯಾಗಿ ಈಗ ಮುಸ್ಲಿಂ ಸಮಾಜದವರಿಗೆ ಇಪ್ತಿಯಾರ ಕೂಟ ಏರ್ಪಡಿಸುವ ಮೂಲಕ ಬಸನಗೌಡ ಬಾದರ್ಲಿ ಭಾವೈಕತೆಯ ಸಂಖ್ಯೆತವಾಗಿದ್ದಾರೆಂದರು. ಮುಸ್ಲಿಂ ಸಮಾಜದ ಮುಖಂಡರು ಹಾಗೂ ಧರ್ಮ ಗುರುಗಳು ಬಸನಗೌಡ ಬಾದರ್ಲಿಯವರನ್ನು ಸನ್ಮಾನಿಸಿ ಗೌರವಿಸಿ ಆರ್ಶಿವಚನ ಮಾಡಿದರು.
ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಖಾಜಾ ಹುಸೇನ್, ರೌಡಕುಂದ, ಮುಖಂಡರಾದ ಆರ್.ವೆಂಕಟೇಶ್ ನಾಯಕ ,ಮುರ್ತುಜಾ, ಖಾದರ್ ಸುಬಾನಿ, ಶಿವಕುಮಾರ್ ಜವಳಿ, ಶರಣಯ್ಯ ಸ್ವಾಮಿ ಕೋಟಿ, ನಧಿಮುಲ್ಲಾ, ಟಿ.ಹುಸೇನ್ ಸಾಬ್ ಸೇರಿದಂತೆ ವಿವಿಧ ಸಮಾಜ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಇಪ್ತಿಯಾರ ಕೂಟದಲ್ಲಿ ಭಾಗವಹಿಸಿದರು.

Share

Leave a Comment