ರಂಜಾನ್: ಇಫ್ತಿಯಾರ್ ಕೂಟ ಆಯೋಜನೆ

ರಾಯಚೂರು.ಜೂ.19- ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಜಾದಳ ಹಿರಿಯ ಮುಖಂಡ ಯುಸೂಫ್ ಖಾನ್ ಅವರು ಆಟೋ ನಗರ ಬಡಾವಣೆಯಲ್ಲಿ ಇಫ್ತಿಯಾರ್ ಕೂಟ ಏರ್ಪಡಿಸಲಾಗಿತ್ತು.

ನಂತರ ಯುಸೂಫ್ ಖಾನ್ ಅವರು ಮಾತನಾಡಿ, ಮುಸ್ಲಿಂ ಬಾಂಧವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಿಯಾರ್ ಕೂಟ ಆಯೋಜಿಸಿ ಪ್ರತಿಯೊಬ್ಬರ ಮೇಲೆ ದೇವರ ಕೃಪೆ ದಯಪಾಲಿಸಲೆಂದು ಹೇಳಿದರು. ಕಾಂಗ್ರೆಸ್ ಯುವ ಮುಖಂಡ ರವಿಬೋಸರಾಜು, ಎನ್.ಶಿವಶಂಕರ ವಕೀಲರು, ಅಸ್ಲಂಪಾಷಾ, ಖಾಜಾ ಮೊಹಿದ್ದನ್ ಅವರು ಹಣ್ಣು ಹಂಪಲು ವಿತರಿಸಿದರು.

ಎನ್.ಶಿವಶಂಕರ ವಕೀಲರು ಮಾತನಾಡಿ, ನಗರದಲ್ಲಿ ರಂಜಾನ್ ಹಬ್ಬವನ್ನು ಎಲ್ಲಾ ಸಮುದಾಯದ ಮುಖಂಡರು ಭಾಗಿಯಾಗಿ ಭಾವೈಕ್ಯತ ಸಂದೇಶ ನೀಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ವಿಶ್ವನಾಥಪಟ್ಟಿ, ಖಾಸಿಂನಾಯಕ, ಇರ್ಫಾನ್, ನರಸಿಂಹಲು, ಬಾಬಾ ಜಾನ್ ರಾಜ್ ನೂರಾರು ಮುಸ್ಲಿಮ ಬಾಂಧವರು ಭಾಗವಹಿಸಿದ್ದರು.

Leave a Comment