ರಂಗೋಲಿ ಬಿಡಿಸಿದ ಸಚಿವೆ ಜಯಮಾಲ

ಮೈಸೂರು, ಅ.೧೧-. ನವರಾತ್ರಿ ಉತ್ಸವ ಎರಡನೇ ದಿನಕ್ಕೆ ಕಾಲಿರಿಸಿದ್ದು, ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಮಹಿಳಾ ದಸರಾ ಅಂಗವಾಗಿ ಇಂದು ಬೆಳಗ್ಗೆ ಅರಮನೆ ಎದುರು ರಂಗೋಲಿ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ್ದ ರಂಗೋಲಿ ಬಿಡಿಸುವ ಸ್ಪರ್ಧೆಗೆ ಸಚಿವ ಜಯಮಾಲ ಸ್ವತಃ ರಂಗೋಲಿ ಬಿಡಿಸಿ ಚಾಲನೆ ಕೊಟ್ಟರು.
ಬಳಿಕ ಸಚಿವೆ ಜಯಮಾಲ ಮಾತನಾಡಿ, ರಂಗೋಲಿ ದೇವರಿಗೆ ಪ್ರಿಯ, ರಂಗೋಲಿಯಲ್ಲೂ ದೇವರಿದ್ದಾನೆ. ಬ್ಯಾಡ್ ಎನರ್ಜಿ ಹೊರ ಹಾಕುವ ಶಕ್ತಿ ರಂಗೋಲಿಗೆ ಇದೆ ಎಂದು ಬಣ್ಣಿಸಿದರು.
ದಸರಾ ರಂಗೋಲಿ ಸ್ಪರ್ಧೆಯಲ್ಲಿ ಮಕ್ಕಳು ಭಾಗಿಯಾಗಿದ್ದಾರೆ. ನಾನು ರಂಗೋಲಿ ಬಿಡಿಸುತ್ತೇನೆ. ರಂಗೋಲಿ ಹಾಕೋದು ನನಗೆ ಇಷ್ಟ. ರಥಸಪ್ತಮಿ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ನಾನು ರಂಗೋಲಿ ಬಿಡಿಸುತ್ತೇನೆ. ಇಂದು ರಂಗೋಲಿಯಲ್ಲಿ ಯಾರು ಪ್ರಥಮ ಬಹುಮಾನ ಪಡೀತಾರೋ ಎನ್ನುವ ಬಗ್ಗೆ ಕೂತೂಹಲ ಇದೆ ಅಂತ ಹೇಳಿ, ಎಲ್ಲಾ ಸ್ಪರ್ಧಾಳುಗಳಿಗೂ ಶುಭ ಕೋರಿದರು.
ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ, ಚಿತ್ರಾರದ ರಂಗು ರಂಗಿನ ರಂಗೋಲಿ ಬಿಡಿಸಿ ಗಮನ ಸೆಳೆದರು. ಅರಮನೆ ಆವರಣ ಬಣ್ಣ ಬಣ್ಣದ ರಂಗೋಲಿಗಳಿಂದ ಕಂಗೊಳಿಸುತ್ತಿತ್ತು.

Leave a Comment