ರಂಗಾದ ಹುಡುಗರು

ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳು ಆಗಮನವಾಗುತ್ತಿದೆ.ಅದರದಲ್ಲಿ ’ರಂಗಾದ ಹುಡುಗರು’ ಚಿತ್ರದ ಕಲಾವಿದರೂ ಕೂಡ.

ಚಿತ್ರದ ಮೂಲಕ ಸಾಗರ್, ಮನು ಹೆಗಡೆ ಮತ್ತು ಸಂದೀಪ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ಅಮಿತಾ ಕುಲಾಲ್ ಮತ್ತು ಸಹನಾ ಪೊನ್ನಪ್ಪ ನಟಿಸಿದ್ದಾರೆ.

rangada_115

ತೇಜಸ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ನಿರ್ಮಾಣದಲ್ಲಿ ಪಾಲುದಾರರು. ಚಿತ್ರಕ್ಕೆ ಬಸವರಾಜು ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಮೂವರು ಹುಡುಗರ ಹೋರಾಟ ಮತ್ತು ಭಯೋತ್ಪಾದನೆ ಸುತ್ತಾ ಚಿತ್ರ ಸಾಗಲಿದೆ ಎಂದರು ನಿರ್ದೇಶಕರು.

ದುಡ್ಡಿನ ಹಿಂದೆ ಬಿದ್ದಾಗ ಏನೆಲ್ಲಾ ಅಗಲಿದೆ ಅದರಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಉತ್ತಮ ಚಿತ್ರ ಮಾಡುವ ಉದ್ದೇಶವೊಂದಲಾಗಿದೆ ಎಂದರು.

ಚಿತ್ರಕ್ಕೆ ಸೇನಾಪತಿ ಸಂಗೀತವಿದೆ.

ಪೋಷಕ ಕಲಾವಿದೆ ಜ್ಯೋತಿ ಚಿತ್ರದಲ್ಲಿ ಪ್ರಾದ್ಯಾಪಕಿಯ ಪಾತ್ರ ಸಿಕ್ಕಿದೆ ಎಂದು ಹೇಳಿಕೊಂಡರು.

Leave a Comment