`ರಂಗಸ್ಥಳ’ ಚಿತ್ರ ಜುಲೈ 12ರಂದು ಬಿಡುಗಡೆ

ಬೆಂಗಳೂರು, ಜು12 – ಮೈತ್ರಿ ಮೂವಿ ಮೇಕರ್ಸ್ ಹಾಗೂ ಜಿ.ಮೂವೀಸ್ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ `ರಂಗಸ್ಥಳ` ಚಿತ್ರ ರಾಜ್ಯಾದ್ಯಂತ 100 ಚಿತ್ರಮಂದಿರಗಳಲ್ಲಿ ಜುಲೈ 12ರಂದು ಬಿಡುಗಡೆಯಾಗುತ್ತಿದೆ

ಈಗಾಗಲೇ ಕಾಂಚನ 3, ಡಿಯರ್ ಕಾಮ್ರೇಡ್, ಚಿತ್ರಗಳನ್ನು ಉತ್ತಮ ಗುಣಮಟ್ಟದಲ್ಲಿ ಕನ್ನಡೀಕರಿಸಿದ ಅನುಭವವಿರುವ ಜಿ ಮೂವೀಸ್ ತಂಡ ಕನ್ನಡ ಡಬ್ಬಿಂಗ್ ನಿರ್ವಹಣೆ ಜವಾಬ್ದಾರಿಯನ್ನು ಪಡೆದುಕೊಂಡಿದ್ದು, 50 ವರ್ಷಗಳ ನಂತರ ತೆಲುಗು ಚಿತ್ರವೊಂದು ಕನ್ನಡಕ್ಕೆ ಡಬ್ ಆಗುತ್ತಿದೆ.

ಸುಕುಮಾರ್ ಅವರು ಕಥೆ, ನಿರ್ದೇಶನದ ಈ ಚಿತ್ರಕ್ಕೆ ದೇವಿಶ್ರೀಪ್ರಸಾದ್ ಅವರ ಸಂಗೀತ ನಿರ್ದೇಶನವಿದೆ. ರತ್ನವೇಲು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುದರ್ಶನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.  ದೇವಿಶ್ರೀ ಪ್ರಸಾದ್ ಸಂಗೀತ ನೀಡಿರುವ `ಗಂಗಮ್ಮ ರಂಗಮ್ಮ’ ಹಾಗೂ `ಎಂಥ ಮುದ್ದಾಗಿದ್ದೀಯ’ ಹಾಡುಗಳು ಜನಪ್ರಿಯವಾಗಿದೆ.

ರಾಮಚರಣ್, ಸಮಂತಾ ಹಾಗೂ ಕನ್ನಡಿಗ ಪ್ರಕಾಶ್ ರಾಜ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡತಿ ಪೂಜಾ ಹೆಗಡೆ ಐಟಂ ಡ್ಯಾನ್ಸ್ ಒಂದರಲ್ಲಿ ಜಿಲೇಬಿ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.

ಆಂಧ್ರದ ರಾಮಚರಣ್ ಅಭಿಮಾನಿಗಳು ಕನ್ನಡದಲ್ಲಿ ಈ ಸಿನಿಮಾ ವೀಕ್ಷಿಸಲು ಉತ್ಸುಕರಾಗಿರುವುದಾಗಿ ಫೇಸ್ ಬುಕ್ ಹಾಗೂ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.

Leave a Comment