ರಂಗಮಂದಿರ ಆರಂಭ

ಬಹುತಾರಾಗಣದ ’ರಂಗಮಂದಿರ”ಸದ್ದಿಲ್ಲದೆ ಮುಹೂರ್ತ ಆರಂಭಿಸಿ ಬಹುತೇಕ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದೆ ಚಿತ್ರತಂಡ. ’ಅರ್ಜುನ’ ಚಿತ್ರದ ಬಳಿಕ ನಿರ್ದೇಶಕ ಶಾಹುರಾಜ್ ಶಿಂಧೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಕಿರುತೆರೆಯಲ್ಲಿ ಹೆಸರು ಮಾಡಿರುವ ನಿರ್ಮಾಪಕ ಆಶುಬೇದ್ರ ಬಂಡವಾಳ ಹಾಕಿದ್ದಾರೆ.

ಕೊಡಗಿನಲ್ಲಿ ಸಂಭವಿಸಿದ ಅನಾಹುತದ ಸಮಯದಲ್ಲಿ ಚಿತ್ರದ ಮುಹೂರ್ತ ಮಾಡಿದ್ದ ತಂಡ,ಅದ್ದೂರಿ ವೆಚ್ಚ ಮಾಡಿ ಹಣ ವ್ಯರ್ಥ ಮಾಡುವ ಬದಲು ಆ ಹಣವನ್ನು ಅಲ್ಲಿನ ಸಂತ್ರಸ್ಥರಿಗೆ ನೀಡಿ ಚಿತ್ರತಂಡ ಮಾನವೀಯತೆ ಮೆರದಿತ್ತು.

rangamandira_115

ಚಿತ್ರದಲ್ಲಿ ಪ್ರವೀಣ್ ತೇಜ್, ಆಸುಬೇದ್ರ, ಆಶಿಕಾ ರಂಗನಾಥ್,ಶೃತಿ ಪ್ರಕಾಶ್,ಅನುಪಮಗೌಡ,ಅವಿನಾಶ್, ರಂಗಾಯಣ ರಘು, ತಬಲ ನಾಣಿ,ಸುಮನ್,ವೀಣಾ ಸುಂದರ್, ವಿಜಯ್ ಚೆಂಡೂರ್ ಸೇರಿದಂತೆ ೮೦ಕ್ಕೂ ಅಧಿಕ ಕಲಾವಿದರು ರಂಗಮಂದಿರದಲ್ಲಿ ವಿವಿಧ ಪಾತ್ರದಾರಿಗಳಾಗಿದ್ದಾರೆ.

ಅದಾದ ಬಳಿಕ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿತ್ತು ಕಳೆದವಾರ ಚಿತ್ರೀಕರಣ ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿ ಅಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿತು. ಮೊದಲು ಮಾತು ಆರಂಭಿಸಿದ ನಿರ್ದೇಶಕ ಶಾಹುರಾಜ್ ಶಿಂಧೆ, ಪ್ರಪಂಚವೇ ಒಂದು ನಾಟಕ ಮಂದಿರ. ನಾಟಕದ ಪರದೆಯ ಹಿಂದೆ ಮುಂದೆ ಏನೆಲ್ಲಾ ನಡೆಯಲಿದೆ. ಯಾರಿಗೆ ಗೊತ್ತಿಲ್ಲ ಅಂತಹ ವಿಷಯವನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ.

rangamandira_159ಊರೊಂದರಲ್ಲಿ ನಟೆಯುವ ಘಟನೆಯನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಚಿತ್ರದಲ್ಲಿ ಐದು ಹಾಡುಗಳಿವೆ, ವಿದೇಶದಲ್ಲಿಯೂ ಚಿತ್ರೀಕರಣ ಮಾಡುವ ಉದ್ದೇಶವಿದೆ ಇನ್ನು ಎಲ್ಲಿ ಎನ್ನುವುದು ನಿರ್ಧಾರವಾಗಿಲ್ಲ.ಒಳ್ಳೆಯ ಚಿತ್ರ ನೀಡುವುದು ನಮ್ಮ ಉದ್ದೇಶ ಅದಕ್ಕಾಗಿ ಎಲ್ಲರೂ ಕೈಜೋಡಿದ್ದಾರೆ ಎಂದು ಹೇಳಿಕೊಂಡರು.

ನಾಯಕ ಪ್ರವೀಣ್ ತೇಜ್, ನಿರ್ಮಾಪಕ ಆಶುಬೇದ್ರ ಅವರ ನಿರ್ಮಾಣದಲ್ಲಿ ಮೂರನೇ ಭಾರಿಗೆ ನಟಿಸುತ್ತಿದ್ದೇನೆ.ಚಿತ್ರದಲ್ಲಿ ನನ್ನದು ಎರಡು ಶೇಡ್ ಬರಲಿದ್ದು ಒಂದು ಇಂಜಿಯರ್ ಮತ್ತೊಂದು ಫೋಟೋಗ್ರಾಫರ್ ಎಂದರೆ ಒಳ್ಳೆಯ ಅವಕಾಶ ಸಿಕ್ಕಿದೆ.ಬೋಲ್ಡ್ ನಟಿಯ ಪಾತ್ರ ಎಂದು ವಿವರ ನೀಡಿದರು. ಹಿರಿಯ ನಟ ಅವಿನಾಶ್, ರಾಜಕಾರಣಿಯ ಪಾತ್ರ. ಕತೆ ಚೆನ್ನಾಗಿದೆ ಎಂದರು. ತಬಲ ನಾಣಿ ಯಥಾ ಪ್ರಕಾರ ಕುಡುಕನ ಪಾತ್ರ ಎಂದು ಹೇಳಿದರು.

ಮತ್ತೊಬ್ಬ ಹಿರಿಯ ನಟ ಸುಮನ್, ಶಾಹುರಾಜ್ ಶಿಂಧೆ ಅವರೊಂದಿಗೆ ಎರಡನೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಾಮಾನ್ಯ ಮನುಷ್ಯನ ಪಾತ್ರ. ಇದರಲ್ಲಿ ರಾಜಕರಾಣಿಯ ಪಾತ್ರ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಿರ್ಮಾಪಕ ಆಶುಬೇದ್ರ, ಒಳ್ಳೆಯ ಚಿತ್ರ ಮಾಡಬೇಕೆನ್ನುವುದು ನಮ್ಮ ತುಡಿತ ಹೀಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಚಿತ್ರಕ್ಕೆ ರೋನೀಸ್ ಫರ್ನಾಂಡೀಸ್, ಅಮಿತಾ ಡಿಸೋಜಾ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಜೆಸ್ಸಿಗಿಪ್ಟ್ ಸಂಗೀತ, ಶರವಣ ನಟರಾಜ್ ಕ್ಯಾಮರ ಚಿತ್ರಕ್ಕಿದೆ.

Leave a Comment