ರಂಗಪ್ಪ ನಾಯಕ : ಜಾದಳ ಮುಖಂಡರ ಮಹತ್ವದ ಸಭೆ

ರಾಯಚೂರು.ಜ.08- ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಜಾದಳ ಪಕ್ಷದಿಂದ ಸ್ಪರ್ಧೆ ಹಾಗೂ ಪಕ್ಷ ಸೇರ್ಪಡೆ ಕುರಿತು ಜಿಲ್ಲಾ ಜೆಡಿಎಸ್ ಪಕ್ಷದ ಮುಖಂಡರು, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಅವರೊಂದಿಗೆ ಇಂದು ಚರ್ಚಿಸಿದರು.
ನಿನ್ನೆ ನಗರಕ್ಕೆ ಆಗಮಿಸಿದ ಅವರನ್ನು ಭೇಟಿಯಾದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಸೇರಿದಂತೆ ಇತರೆ ಮುಖಂಡರು ಅವರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿದರು. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಲೋಕಸಭಾ ಕ್ಷೇತ್ರಕ್ಕೆ ರಾಜಾ ರಂಗಪ್ಪ ನಾಯಕ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಕುರಿತು ಪ್ರಸ್ತಾಪಿಸಿದರು. ಈ ಬೆಳವಣಿಗೆ ನಂತರ ರಾಜಾ ರಂಗಪ್ಪ ನಾಯಕ ಅವರ ಹೆಸರು ಪ್ರಸ್ತಾಪಕ್ಕೆ ಬಂದಿತ್ತು.
ರಾಜಾ ರಂಗಪ್ಪ ನಾಯಕ ಅವರು ಜಾದಳ ಪಕ್ಷ ಸೇರ್ಪಡೆ ಕುರಿತು ನಿರೀಕ್ಷೆಗಳು ಹೆಚ್ಚಾಗುವಂತೆ ಮಾಡಿದೆ. ಏತನ್ಮಧ್ಯೆ ಅವರು ನಗರಕ್ಕೆ ಆಗಮಿಸಿರುವುದು ಮತ್ತು ಜಾದಳ ಮುಖಂಡರು ಅವರನ್ನು ಭೇಟಿಯಾಗಿರುವ ಲೋಕಸಭಾ ಕ್ಷೇತ್ರದ ರಾಜಕೀಯ ಮತ್ತಷ್ಟು ಬಿಸಿಯಾಗುವಂತೆ ಮಾಡಿದೆ. ಇದೇ ತಿಂಗಳು ಜ.17, 18 ರಂದು ಬೆಂಗಳೂರಿನಲ್ಲಿ ಪಕ್ಷ ಸೇರುವ ಸಾಧ್ಯತೆಗಳ ಬಗ್ಗೆಯೂ ಹೇಳಲಾಗುತ್ತಿದೆ.
ಜಾದಳ ಮುಖಂಡರು ಇಂದು ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆ ಬಗ್ಗೆ ಚರ್ಚಿಸಿರುವುದು ಗಮನಾರ್ಹವಾಗಿದೆ. ಇಂದು ರಾಜಾ ರಂಗಪ್ಪ ನಾಯಕ ಅವರನ್ನು ಭೇಟಿಯಾದ ಜಾದಳ ಮುಖಂಡರಾದ ಕಾರ್ಯಾಧ್ಯಕ್ಷ ಎನ್.ಶಿವಶಂಕರ ವಕೀಲರು, ಹಿರಿಯ ಮುಖಂಡ ಯೂಸೂಫ್ ಖಾನ್, ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷ ಪಿ.ಯಲ್ಲಪ್ಪ, ಖಾಸಿಂ ನಾಯಕ, ವಿಶ್ವನಾಥಪಟ್ಟಿ, ಶಾಮ ಸುಂದರ್, ತಾಲೂಕಿನ ಪಂಚಾಯತ್ ಸದಸ್ಯರಾದ ಶಂಶುದ್ದಿನ್, ನರಸಪ್ಪ, ಇತರರು ಉಪಸ್ಥಿತರಿದ್ದರು.

Leave a Comment