ಯೋಜನೆಗಳ ಸದುಪಯೋಗ ಪಡೆದು ಮುಂದೆ ಬರಲು ಕರೆ

ಬಾದಾಮಿ,ಫೆ 11-ಅಂಬಿಗರು ಎಂದು ನಾಡಿನಲ್ಲಿ ಗುರುತಿಸಿಕೊಂಡಿರುವ ಗಂಗಾಮತಸ್ಥ ಸಮಾಜ ಬಾಂಧವರು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವುದರ ಜೊತೆಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಸಂಘಟನಾ ಶಕ್ತಿಯ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು
ಅವರು ಸೋಮವಾರ ನಗರದ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಜರುಗಿದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಮಾನವೀಯ ಮೌಲ್ಯಗಳನ್ನು ಅರಿತು ಜೀವನವನ್ನು ಸಾಗಿಸುವದರ ಜೊತೆಗೆ ಮತ್ತೊಬ್ಬರಿಗೆ ಪರೋಪಕಾರಿಯಾಗಿ ಜೀವನ ಸಾಗಿಸಬೇಕು ಸಮಾಜವನ್ನು ಸನ್ಮಾರ್ಗದತ್ತ ತರುವ ಹಿತಚಿಂತನೆಯುಳ್ಳ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ದಿಟ್ಟತನ ನಮಗೆಲ್ಲ ಆದರ್ಶವಾಗಿದ್ದು, ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು
ಪ್ರಾಚಾರ್ಯ ಜಿ.ಜಿ ಹಿರೇಮಠ ಮಾತನಾಡಿ ಸಮಾಜ ಪ್ರಕೃತಿ ನಾಡು ನುಡಿ ಸಂಸ್ಕøತಿಯನ್ನು ಚೌಡಯ್ಯನವರ ವಚನಗಳಲ್ಲಿ ಕಾಣಬಹುದು. ಚೌಡಯ್ಯನವರ ತತ್ವ ಸಿದ್ಧಾಂತಗಳನ್ನು ಅನುಸರಿಸಿ ಅವರು ಹೇಳಿದ ಸಂದೇಶಗಳನ್ನು ಸಾರ್ಥಕ ರೂಪದಲ್ಲಿ ತರಬೇಕು. 249 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಆದರೆ 300 ಕ್ಕೂ ಹೆಚ್ಚು ಇರುವ ವಚನಕಾರರಲ್ಲಿ ಚೌಡಯ್ಯನವರ ವಚನಗಳು ನೇರವಾಗಿ ಜನರ ಮನಸ್ಸಿಗೆ ಮುಟ್ಟುವಂತ ವಚನಗಳಾಗಿದ್ದವು ಯಾರೂ ಕಷ್ಟದಲ್ಲಿ ಇರುತ್ತಾರೊ ಅವರನ್ನು ದಡಕ್ಕೆ ಸೇರಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ಆಶಿರ್ವಚನ ನೀಡಿದರು ವೇದಿಕೆಯಲ್ಲಿ ಸಮಾಜದ ಅಧ್ಯಕ್ಷ ಅಡಿವೆಪ್ಪ ಅರಭೂತನವರ, ಪುರಸಭೆ ಸದಸ್ಯ ಶಂಕರ ಕನಕಗಿರಿ,  ಯಮುನಾ ಹೊಸಗೌಡರ, ಗೌರಮ್ಮ ಬೇಲೂರಪ್ಪನವರ, ತಹಶೀಲದಾರ ಸುಹಾಸ ಇಂಗಳೆ, ತಾಪಂ ಅದ್ಯಕ್ಷೆ ರೇಣುಕಾ ಕೊಳ್ಳನವರ, ಎಪಿಎಂಸಿ ಅಧ್ಯೆಕ್ಷ ಭೀಮನಗೌಡ ಬಾಲನ್ನವರ, ಸಂಗಮೇಶ ಅಂಬಿಗೇರ, ಅರ್ಜುನ ಬಾರಕೇರ ಅಶೋಕ ಅಂಬಿಗೇರ, ಹನುಮಂತ ಬಾರಕೇರ, ರಾಮಪ್ಪ ಬಾರಕೇರ, ಷನ್ಮುಕ ಬಾರಕೇರ, ಬಾಲಚಂದ್ರ ಅಂಬಿಗೇರ, ಬಸವರಾಜ ಮಾಳಗಿ, ಜಗದೀಶ ಕೊಟಗಿ ಶ್ರೀಕಾಂತ ಅಂಬಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಲಕ್ಷ್ಮೀ ಮಾಳವಾಡ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.
ಬೀರಲಿಂಗೇಶ್ವರ ಸಮುದಾಯ ಭವನದಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಸೋತ್ಸವ ಮೆರವಣಿಗೆ ಆರಂಭಗೊಂಡು ಚೌಡಯ್ಯನವರ ಭಾವಚಿತ್ರದೊಂದಿಗೆ 1000ಕ್ಕೂ ಹೆಚ್ಚು ಸುಮಂಗಲೆಯರು ಕುಂಭಮೇಳ, ಡೊಳ್ಳು, ಕರಡಿಮಜಲು, ಭಜನಾ ಮಂಡಳಿಯೂಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಬಂದು ತಲುಪಿತು.
ಭರಮಪ್ಪ ಪೂಜಾರ, ಮರಿಯಪ್ಪ ಬಾರಕೇರ, ರಮೇಶ ಕುದರಿಮನಿ,  ರಾಮಣ್ಣ ಬಾರಕೇರ, ರಂಗನಾಥ ಬಾರಕೇರ, ತಿಪ್ಪಣ್ಣ ಗಣಕುಮಾರ, ಯಮನಪ್ಪ ಬಾರಕೇರ, ರಮೇಶ ಅಂಬಿಗೇರ ಮಲ್ಲಪ್ಪ ಬಾರಕೇರ, ಪರಸು ಬಾರಕೇರ, ವೀರುಪಾಕ್ಷ ಅಂಬಿಗೇರ, ದಶರಥ ಅಂಬಿಗೇರ ಮುದಿಯಪ್ಪಾ ಬಾರಕೇರ, ಪ್ರಭು ಬಾರಕೇರ, ತುಳಸಪ್ಪಾ

Leave a Comment