ಯೋಜನೆಗಳ ಸದುಪಯೋಗಕ್ಕೆ ಮಹಿಳೆಯರಿಗೆ ಕರೆ

ಮುಂಡಗೋಡ ಸೆ, 22 ;  ಸರ್ಕಾರವು ಮಕ್ಕಳಿಗಾಗಿ  ಮತ್ತು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಎಲ್ಲ ಸೌಲಭ್ಯಗಳನ್ನು ಪಡೆದು ಮಹಿಳೆಯರು ಮುಂದೆ ಬರಬೇಕು ಎಂದು ತಾಲೂಕಾ ಪಂಚಾಯತ್ ಸದಸ್ಯ ಜ್ಞಾನದೇವ ಗುಡಿಯಾಳ ಹೇಳಿದರು.
ಅವರು ತಾಲೂಕಿನ ನ್ಯಾಸರ್ಗಿ ಗ್ರಾಮದ ಸಮೂದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣ ಮತ್ತು ಪಂಚಾಯತ ರಾಜ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಹಾಗೂ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪೋಷಣ ಅಭಿಯಾನ ಕಾಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ದೀಪಾ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಯೋಜನೆಗಳನ್ನು ವಲಯ ಮೇಲ್ವೀಚಾರಕಿ ಸುರೇಖಾ ಮಲ್ಲಾಪುರ ತಿಳಿಸಿದರು. ಪೌಷ್ಠಿಕ ಆಹಾರ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಂಡಗೋಡ ವಲಯದ ಮೇಲ್ವಿಚಾರಕಿ ರೂಪಾ ಅಂಗಡಿ ಹೇಳಿದರು.
ಕಾರ್ಯಕ್ರಮವನ್ನು  ಆಶಾ ಕಾರ್ಯಕರ್ತೆ ಗಂಗಾ ಚಲವಾದಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಶಾರಾದಾ ನಾಯರ ನಿರೂಪಣೆ,  ಪುಷ್ಪಾ ಪಾಟೀಲ್ ವಂದಿಸಿದರು. ಇದೆ ವೇಳೆ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀಬಾಯಿ ಕುರಬರ ಗರ್ಭೀಣಿ ಮಹಿಳೆಯರಿಗೆ ಸಿಮಂತ್ ಕಾರ್ಯ ನಡೆಸಿದರು.
ಈ ಸಂಧರ್ಭದಲ್ಲಿ ಬಾಚಣಕಿ ಗ್ರಾಮ ಪಂಚಾಯತ್ ಸದಸ್ಯರಾದ ಬಸವರಾಜ ಭೋವಿ, ಹುಸೇನ ದೊಡ್ಡಮನಿ, ನಾಗರಾಜ ಕಾಳೆನವರ, ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಪೂರ್ಣಿಮಾ ದಿಡ್ಡಮನಿ, ಫಾತೀಮಾ ಕಿತ್ತೂರ  ಹಾಗೂ ಆ ಭಾಗದ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Leave a Comment