ಯೋಜನೆಗಳನ್ನು ಗುಡಿ ಕೈಗಾರಿಕೆಗಳಿಗೆ ಬಳಸಿಕೊಳ್ಳಿ: ಡಾ.ವೆಂಕಟೇಶ ಭರಮಕ್ಕ

ಕಂಪ್ಲಿ:ಡಿ.31. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಗುಡಿ ಕೈಗಾರಿಕೆಗಳಿಗೆ ಸದುಪಯೋಗ ಮಾಡಿಕೊಳ್ಳುವ ಮೂಲಕ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಡಾ.ವೆಂಕಟೇಶ ಭರವಕ್ಕ ಹೇಳಿದರು.

ಪಟ್ಟಣದ ಜೋಗಿ ಕಾಲುವೆ ಹತ್ತಿರದ ಯಲ್ಲಮ್ಮ ದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 3 ಒಕ್ಕೂಟಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬ ಮಹಿಳೆಯರು ಅಕ್ಷರದ ಜ್ಞಾನವನ್ನು ಪಡೆದುಕೊಂಡರೆ ಜೀವನವನ್ನು ಉತ್ತಮದತ್ತ ಕೊಂಡೊಯ್ಯಬಹುದು. ಧರ್ಮಸ್ಥಳದ ವಿರೇಂದ್ರ ಹೆಗಡೆಯವರು ಮಹಿಳೆಯರ ಬದುಕು ಒಳ್ಳೆಯ ಬದುಕಾಗಬೇಕೆಂಬ ಉದ್ದೇಶದಿಂದ ಮಹಿಳೆಯರಿಗೆ ಗುಂಪಿನ ಲೋನ್ ಮೂಲಕ ಹಣವನ್ನು ಬಳಕೆ ಮಾಡಲು ಮುಂದಾಗಿದ್ದಾರೆ. ಅದರಂತೆ ಇಂದಿನ ದಿನಮಾನದಲ್ಲಿ ಧರ್ಮಸ್ಥಳ ಗುಂಪಿ ನೀಡುತ್ತಿರುವ ಹಣವು ಮಹಿಳೆಯ ವಿವಿಧ ಗುಡಿ ಕೈಗಾರಿಕೆಗಳಿಗೆ ಉಪಯೋಗವಾಗುತ್ತದೆ ಎಂದರು.

ಬೂದಗುಂಪಿ ಹುಸೇನ್‍ಸಾಬ್ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಈ ಧರ್ಮಸ್ಥಳ ಗುಂಪಿನಿಂದ ಮಹಿಳೆಯರು ಗುಡಿ ಕೈಗಾರಿಕೆ ಮಾಡುವ ಮೂಲಕ ಅಭಿವೃದ್ಧಿ ಕಡೆ ಮುಖ ಮಾಡಿದ್ದಾರೆ. ಗುಂಪಿನಿಂದ ಪಡೆಯುವ ಹಣವನ್ನು ಸರಿಯಾದ ವ್ಯವಹಾರಕ್ಕೆ ಸದುಪಯೋಗಿಸಿಕೊಳ್ಳಬೇಕು ಎಂದರು.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ತಾಲೂಕು ಕೃಷಿ ಅಧಿಕಾರಿ ದೊಡ್ಡನಗೌಡ ಪಾಟೀಲ್ ಮಾತನಾಡಿದರು.

ಇದೇ ಸಸಂದರ್ಭದಲ್ಲಿ 3 ಒಕ್ಕೂಟದ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾಸ ಎನ್.ರಾಮಂಜಿನೀಯಲು, ವಿ.ನಾಗರಾಜ, ಗೆಜ್ಜಳ್ಳಿ ಬಾಷಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಂಪ್ಲಿ ವಲಯದ ಮೇಲ್ವಿಚಾರಕಿ ಕೆ.ಮಂಜುಳಾ, ಸಹಾಯಕಿಯರಾದ ಅಶ್ವಿನಿ, ಹೇಮವತಿ, ಜಯಮ್ಮ ಸೇರಿ ಮಹಿಳೆಯರು ಪಾಲ್ಗೊಂಡಿದ್ದರು.

Leave a Comment