ಯೋಗ ಧ್ಯಾನ ಶಿಬಿರ ನಾಳೆಯಿಂದ

ಕಲಬುರಗಿ ಫೆ 13: ಆನಂದಮಾರ್ಗ ಪ್ರಚಾರಕ ಸಂಘದಿಂದ ಮೂರು ದಿನಗಳ ಉಚಿತ ಯೋಗ ಧ್ಯಾನ,ಸಿದ್ಧಾಂತ ತರಗತಿಗಳ ಶಿಬಿರ ನಾಳೆ ( ಫೆಬ್ರವರಿ 14) ಯಿಂದ ಫೆ.16 ರವರಗೆ ನಗರದ ದರ್ಗಾರಸ್ತೆ,  ಸರಕಾರಿ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ನಡೆಯಲಿದೆ ಎಂದು ಆಚಾರ್ಯ ಪ್ರಿಯತೋಶಾನಂದ ಅವಧೂತ ಅವರು ಇಂದು ಸುದ್ದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯೋಗ ಧ್ಯಾನ ತರಬೇತಿಯು ಬೆಳಿಗ್ಗೆ 6 ರಿಂದ 7 ಗಂಟೆ ಮತ್ತು ಸಂಜೆ 5 ರಿಂದ 6.30 ವರೆಗೆ ಸಿದ್ಧಾಂತ ತರಗತಿಗಳು ಬೆಳಿಗ್ಗೆ 10 ರಿಂದ 12 ಮತ್ತು ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ನಡೆಯಲಿವೆ.ಆಸಕ್ತರು ಮಾಹಿತಿಗೆ ( ಮೊ 9482300671) ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಚಾರ್ಯ ಮನೋಜಿತಾನಂದ ಅವಧೂತರು,ಆಚಾರ್ಯ ಸತ್ಯರಥಾನಂದ ಅವಧೂತರು,ಬಸಂತಿಬಾಯಿ ಉಪಸ್ಥಿತರಿದ್ದರು..

Leave a Comment