“ಯೋಗ ಎಂಬುದು ವಿಶೇಷ ಜ್ಞಾನದ ವಿಜ್ಞಾನ “– ಯೋಗ ಮಾದವ್

ಬಳ್ಳಾರಿ,ಏ.21: “ಯೋಗ ಎಂಬುದು ವಿಶೇಷ ಜ್ಞಾನದ ವಿಜ್ಞಾನ “ ಎಂದು ಶ್ರೀ ವಚನಾನಂದ ಸ್ವಾಮಿಜೀಗಳವರ ಶಿಷ್ಯರಾದ ಶ್ರೀ ಯೋಗ ಮಾದವ್ ಅಭಿಪ್ರಾಯ ಪಟ್ಟರು. ಸ್ಥಳೀಯ ಬಸವೇಶ್ವರ ನಗರದಲ್ಲಿರುವ ವುಂಕಿ ಮರಿಸಿದ್ದಮ್ಮ ಶಾಲೆಯ ಆವರಣದಲ್ಲಿ ಪತಂಜಲಿ ಯೋಗ ಸಮತಿ ಆಶ್ರಯದಲ್ಲಿ ನಡೆಯುವ ಬಸವೇಶ್ವರ ಯೋಗ ಕೇಂದ್ರದಲ್ಲಿ ಬೇಸಿಗೆ ಯೋಗ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಯೋಗ ದ್ಯಾನ ಅಭ್ಯಾಸವನ್ನು ಮಾಡಿಸಿ ಮಾತನಾಡಿದ ಅವರು, ಯೋಗ – ದೇಹ ಮನಸ್ಸುಗಳನ್ನು ಪಳಗಿಸಿ, ಅಂತರಂಗದಲ್ಲಡಗಿರುವ ಅದ್ಭುತ ಚೈತನ್ಯ ಶಕ್ತಿಯ ಅನಾವರಣಗೊಳಿಸಿ, ತನ್ಮೂಲಕ ದೈವ ದರ್ಶನ ಯೋಗವನ್ನು ಒದಗಿಸುವ ಅದ್ಭುತ ಸಾಧನ. ಬಹುತೇಕರ ಕಲ್ಪನೆಯಲ್ಲಿ ಯೋಗ ಎಂಬುದು ಕೇವಲ ಅಂಗಾಂಗಗಳನ್ನು ತಿರುಗಿಸುವ ತ್ರಾಸದಾಯಕ ಪ್ರಕ್ರಿಯೆ. ಆದರೆ ಯೋಗ ಅದೆಲ್ಲಕ್ಕೂ ಮಿಗಿಲಾಗಿ ತನು ಹಾಗೂ ಮನದ ಸ್ವಾಸ್ಥ್ಯವನ್ನು ವೃದ್ಧಿಸುವ ದೈವದತ್ತ ವರ.

ಯೋಗ ಎಂಬುದು. ವಿಶೇಷ ಜ್ಞಾನದ ವಿಜ್ಞಾನ. ಮಾನವನು ತನ್ನ ದೈನಂದಿನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಆರೋಗ್ಯಪೂರ್ಣ ದೇಹದ ಜೋತೆಗೆ ಪ್ರಶಾಂತ ಮನಸ್ಸೂ ಅತೀ ಅವಶ್ಯಕವಾಗುತ್ತದೆ. ಎಲ್ಲೆಲ್ಲೋ ಓಡುತ್ತಿರುವ ಮನಸ್ಸನ್ನು ಧ್ಯಾನಯೋಗದ ಮೂಲಕ ಹತೋಟಿಯಲ್ಲಿಡಲು ಸಾಧ್ಯವಾದರೆ ಆಸನವೆಂಬುದು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಬೆವರಿನ ಮೂಲಕ ಹೊರಹಾಕಲು ಸಹಕಾರಿಯಾಗುತ್ತದೆ. ಅಷ್ಠಾಂಗ ಯೋಗದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಸಮಾಧಿಗಳಿಂದ ಅದ್ಭುತ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಆಂಗ್ಲ ಭಾಷೆಯ ಲೆಸ್ ಲಗ್ಗೇಜ್ ಮೋರ್ ಕಂಫರ್ಟ ಎಂಬ ನಾಣ್ಣುಡಿಯಂತೆ. ನಮ್ಮೊಳಗಿರುವ ಭೌತಿಕ ಹಾಗೂ ಅಭೌತಿಕ ಕಶ್ಮಲಗಳನ್ನು ವಿಸರ್ಜಿಸಲು ಯೋಗ ಬಹಳ ಸಹಕಾರಿಯಾಗಿದೆಂದು ಯೋಗಾಭ್ಯಾಸದ ಜೊತೆಗೆ ತಿಳಿಸಿದರು.. ಶಿಬಿರದಲ್ಲಿ ಪತಂಜಲಿ ಯೋಗ ಮಾರ್ಗದರ್ಶಕರಾದ ಇಸ್ವಿ ಪಂಪಾಪತಿ ಮುಖ್ಯ ಯೋಗ ಶಿಕ್ಷಕರಾದ ತಿಪ್ಪಯ್ಯ, ವುಂಕಿರಾಜಶೇಖರ, ರುದ್ರಪ್ಪ ವಾಮಣ್ಣ , ವೀರೇಶ್, ಶಿವಲಿಂಗಪ್ಪ , ಶಿವರೆಡ್ಡಿ , ಜಯಂತಿ , ಪುಷಾ, ಲತಾ , ಪದ್ಮ , ಸ್ವೇತಾ ಸುಮಾರು 400 ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

 

Leave a Comment