ಯೋಗರಾಜ್ ಭಟ್ರು ತಡರಾತ್ರಿ ಭೇಟಿಯಾಗಿದ್ದು ಯಾರನ್ನ?

ಬೆಂಗಳೂರು, ಫೆ 06 -ಅದೊಂದು ದಿನ ಯೋಗರಾಜ್ ಭಟ್ರು ಮನೆಗೆ ಬರೋದು ತಡವಾಗಿತ್ತಂತೆ  ಪತ್ನಿ ಹುಸಿಮುನಿಸಿನಿಂದ ಬಾಗಿಲು ತೆರೆಯೋಕೆ ಒಲ್ಲೆ ಅಂದ್ರಂತೆ. . .  ಆಗ ಪ್ರವೇಶ ದ್ವಾರದ ಬಳಿ ಪರದಾಡುತ್ತಿದ್ದ ಅವರನ್ನ ವ್ಯಕ್ತಿಯೊಬ್ಬರು ಭೇಟಿಯಾದ್ರಂತೆ

ಅಷ್ಟು ಹೊತ್ತಿನಲ್ಲಿ ಭಟ್ಟರನ್ನ ಭೇಟಿಯಾಗಿದ್ದು ಯಾರು ಗೊತ್ತಾ?  ಅವರ ಎದುರು ಮನೆಯ ಮನೋಹರ್ ಐಯ್ಯರ್!  ಹೌದು, ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದ ಐಯ್ಯರ್, ಆ ಬಗ್ಗೆ ತಿಳಿಸೋಕೆ ಭಟ್ರ ಬಳಿ ಅಷ್ಟು ಹೊತ್ನಲ್ಲಿ ಬಂದಿದ್ರಂತೆ

“ರಾಜಕೀಯದ ಬಗ್ಗೆ ಗೊತ್ತಿಲ್ಲದ, ಯಾವ ಪಕ್ಷಕ್ಕೂ ಸೇರದ ನನ್ನ ಬಳಿ ಚುನಾವಣೆಗೆ ಸ್ಪರ್ಧಿಸಿದ್ದ ಮನೋಹರ್ ಐಯ್ಯರ ಬಂದಿದ್ರು,  ಕೆಲ ದಿನಗಳ ಬಳಿಕ ಮತ್ತೆ ಭೇಟಿಯಾದಾಗ ಸಿನಿಮಾ ಮಾಡ್ತೀನಿ ಅಂದ್ರು  ಬೇಡ ಅಂದಿದ್ದೆ  . . . ಆ ಮಾತಿಗೆ ಕೆರಳಿ ನಿಂತ ಐಯ್ಯರ್ ಒಂದೊಳ್ಳೆ ಕಾನ್ಸೆಪ್ಟ್ ಇರೋ ‘ಗುಳೆ’ ಕಿರುಚಿತ್ರವನ್ನ ನಿರ್ಮಿಸಿದ್ದಾರೆ  ಜತೆಗೆ ಐಯ್ಯರ್ ಟಾಕೀಸ್ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ ತುಂಬಾ ಸಂತೋಷವಾಗ್ತಿದೆ” ಎಂದು ಯೋಗರಾಜ್ ಭಟ್ರು ‘ಐಯ್ಯರ್ ಟಾಕೀಸ್’ ಉದ್ಘಾಟನೆ ಬಳಿಕ ತಿಳಿಸಿದ್ರು

ಮನೋಹರ್ ಐಯ್ಯರ್ ಮಾತನಾಡಿ, ..ಗುಳೆ.. ಪೂರ್ವ ಸಿದ್ದತೆ ಇಲ್ಲದೆ ನಿರ್ಮಿಸಿದ ಕಿರುಚಿತ್ರ…ನಿರ್ದೇಶಕರು ಕಥೆ ತಂದಾಗ ಐಯ್ಯರ್ ಟಾಕೀಸ್ ಇನ್ನೂ ಆಗಿರಲಿಲ್ಲ

 ಸಾಮಾಜಿಕ ಕಳಕಳಿಯ ಹಾಗೂ ದೇಶಭಕ್ತಿ ಸಾರುವ ‘ವಿದುರಾಶ್ವತ್ಥ’ ಮತ್ತು ‘ದೇವರ ಹೂವು’ ಐಯ್ಯರ್ ಟಾಕೀಸ್‍ ನ ಮುಂದಿನ 2 ಕಿರುಚಿತ್ರಗಳಾಗಲಿವೆ””ಎಂದರು

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ನಿರ್ದೇಶಕ ಪಿ ಶೇಷಾದ್ರಿ, “ಗುಳೆ’ ಒಳ್ಳೆಯ ಪ್ರಯತ್ನ,   ನಿಮಗೋಸ್ಕರ ನೀವು ಚಿತ್ರ ಮಾಡಿದಾಗ ಪ್ರೇಕ್ಷಕರಿಗೂ ತಲುಪುತ್ತದೆ…ಎಂದು ಹೇಳಿದರು

ಸಂಚಾರಿ ವಿಜಯ್ “ಇಂದು ಸರ್ಕಾರಿ ಶಾಲೆಗಳೇ ಗುಳೆ ಹೋಗುವ ಕಾಲ ಬಂದಿದೆ… ಅದನ್ನು ತಡೆಯಬೇಕಿದೆ” ಎಂದು ತಿಳಿಸಿದ್ರು

Leave a Comment