ಯೇಮೆರಾ ಇಂಡಿಯಾಕ್ಕೂ ಟಿಕ್ ಟಾಕ್ ಲಗ್ಗೆ

ಪ್ರವಾಸಿ ತಾಣದ ಅಭಿಯಾನ
ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿ ಮೋಜು ಮಸ್ತಿ ಮಾಡಲು ಯಾರಿಗೆ ಇಷ್ಟ ಇರೋದಿಲ್ಲ ಹೇಳಿ. ಈ ಪ್ರವಾಸಿ ತಾಣಗಳಿಗೆ ತೆರಳುವ ಮುನ್ನ ಆ ಜಾಗದ ಬಗ್ಗೆ ಮಾಹಿತಿ ಇರಬೇಕು. ಅಲ್ಲಿ ನೋಡಬೇಕಾದ ಪ್ರೇಕ್ಷಣೀಯ ಸ್ಥಳ ವಿವರಗಳು ಗೊತ್ತಿದ್ದರೆ ಇನ್ನೂ ಒಳ್ಳೆಯದಲ್ಲವೆ. ಈಗಾಗಲೇ ಟಿಕ್ ಟಾಕ್ ವಿಡಿಯೋಗಳು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಮನ್ನಣೆ ಗಳಿಸಿದೆ. ಈಗ ಭಾರತದ ನಯನ ಮನೋಹರ, ಕುತೂಹಲಕಾರಿ ಪ್ರವಾಸಿ ತಾಣಗಳನ್ನು ಪ್ರದರ್ಶಿಸಲು ಟಿಕ್ ಟಾಕ್ .ಯೇಮೇರಾ ಇಂಡಿಯಾ ಎಂಬ ವಿನೂತನ ಅಭಿಯಾನಕ್ಕೆ ಮುನ್ನುಡಿ ಬರೆದಿದೆ. ಈ ಪ್ರವಾಸಿ ತಾಣಕ್ಕೂ ಲಗ್ಗೆ ಹಾಕಿದೆ.
ಟಿಕ್ ಟಾಕ್ ವಿಡಿಯೋಗಳು 100 ದೇಶಗಳು ಹಾಗೂ ಪ್ರದೇಶಗಳ ಲೈವ್ ಆಗಿರುವ ಟಿಕ್ ಟಾಕ್ ಟ್ರಾವೆಲ್ ಅಭಿಯಾನದಲ್ಲಿ ಅತಿ ಹೆಚ್ಚು ಮಂದಿ ಪ್ರವಾಸಿ ತಾಣಗಳ ಹ್ಯಾಶ್ ಟ್ಯಾಗ್‌ಗಳನ್ನು ಬಹಿರಂಗ ಪಡಿಸುತ್ತಿದ್ದು, ತಾಜ್‌ಮಹಲ್, ಸ್ವರ್ಣಮಂದಿರ ಹಾಗೂ ಹಿಮಾಲಯ ಪ್ರವಾಸಿ ತಾಣಗಳ ವಿಡಿಯೋಗಳು ಇದರಲ್ಲಿವೆ. ಈ ಮೂಲಕ ಟಿಕ್ ಟಾಕ್ ಟ್ರಾವೆಲ್ ಅಭಿಯಾನದ ಭಾರತೀಯ ಆವೃತ್ತಿಗೆ ಚಾಲನೆ ನೀಡಿದೆ.
ಇನ್ -ಆಪ್ ಅಭಿಯಾನದ ಭಾಗವಾಗಿರುವ ಯೇಮೇರಾ ಇಂಡಿಯಾ ಕ್ಯಾಂಪೈನ್, ಟಿಕ್‌ ಟಾಕ್ ಬಳಕೆದಾರರು ದೇಶದ ತಮ್ಮ ಪ್ರವಾಸದ ಸುಮಧುರ ಕ್ಷಣಗಳನ್ನು ಜಗತ್ತಿನೊಂದಿಗೆ ಹಂಚಕೊಳ್ಳಲು ವೇದಿಕೆಯಾಗಿದ್ದು, ಭಾರತದ ಒಂದು ಪ್ರಮುಖ ಪ್ರವಾಸಿ ತಾಣಗಳನ್ನಾಗಿ ಬಿಂಬಿಸಲು ಟಿಕ್ ಟಾಕ್ ಮುಂದಾಗಿರುವುದು ವಿಶೇಷ.
ಅಂದಹಾಗೆ ದಕ್ಷಿಣ ಭಾರತದಲ್ಲಿ ಕೇರಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ತುದಿಗಾಲಲ್ಲಿ ನಿಂತಿರುತ್ತಾರೆ. ಹೀಗಾಗಿ ಈ ಪ್ರವಾಸಿ ಅಭಿಯಾನದ ಭಾಗವಾಗಿ ಕೇರಳ ರಾಜ್ಯ ಪ್ರವಾಸೋದ್ಯಮ ಇಲಾಖೆ ಟಿಕ್ ಟಾಕ್‌ನಲ್ಲಿ ತನ್ನ ಖಾತೆಯನ್ನು ತೆರೆದು ಪ್ರವಾಸಿ ತಾಣಗಳ ಸೌಂದರ್ಯದ ಬಗ್ಗೆ ಪ್ರಚಾರಕ್ಕಾಗಿ ಟಿಕ್ ಟಾಕ್ ವೇದಿಕೆಯನ್ನು ಬಳಸಿಕೊಳ್ಳಲಿದೆ. ಈ ಮೂಲಕ ವೇದಿಕೆ ಪ್ರವೇಶಿಸಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.
ಕೇರಳ ದೇಶದ ಅತ್ಯಾಕರ್ಷಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಟಿಕ್ ಟಾಕ್ ಮೂಲಕ ವಿನೂತನ ರೀತಿಯಲ್ಲಿ ಪ್ರಚಾರ ನೀಡಲು ಪರಿಣಾಮಕಾರಿಯಾಗಿ ನೆರವಾಗುವ ವಿಶ್ವಾಸ ಹೊಂದಿದೆ. ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಸಂಖ್ಯೆಯ ಪ್ರವಾಸಿ ತಾಣ ಕುರಿತ ಹ್ಯಾಶ್ ಟ್ಯಾಗ್‌ಗಳನ್ನು ಈಗಾಗಲೇ ಟಿಕ್ ಟಾಕ್‌ನಲ್ಲಿ ಲಕ್ಷಾಂತರ ವಿವ್‌ಗಳು ಹೊಂದಿದ್ದು ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಅಭಿಮಾನಿಗಳಿಗೆ ತಮ್ಮ ಅಚ್ಚುಮೆಚ್ಚಿನ ಪ್ರವಾಸಿ ಕ್ಷಣಗಳನ್ನು ಸೆರೆಹಿಡಿದುಕೊಳ್ಳಲು ಪ್ರೋತ್ಸಾಹ ನೀಡಲು ಟಿಕ್ ಟಾಕ್ ಯೇಮೇರಾ ಇಂಡಿಯಾ ಅಭಿಯಾನ ಆರಂಭಿಸಿದೆ.
ಟಿಕ್ ‌ಟಾಕ್‌ನಲ್ಲಿ ಅದ್ಭುತ ಪ್ರವಾಸಿ ತಾಣಗಳ ವಿಡಿಯೋಗಳನ್ನು ವೀಕ್ಷಿಸಿದ ಸಾಮಾಜಿಕ ಜಾಲತಾಣಗಳ ಅಭಿಮಾನಿಗಳು ಕೇರಳ ರಾಜ್ಯ ಪ್ರವಾಸ ಕೈಗೊಂಡು ಇಲ್ಲಿನ ರಮಣೀ ಪ್ರವಾಸಿ ತಾಣಗಳನ್ನು ನೇರವಾಗಿ ಸವಿಯುತ್ತಾರೆ ಎಂಬ ನಂಬಿಕೆಯನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆಯಂತೆ.
ಟ್ರಾವೆಲ್ ಹ್ಯಾಶ್ ಟ್ಯಾಗ್‌ನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರವಾಸಿ ತಾಣದ ವಿಡಿಯೋಗಳು ಅಪ್‌ಲೋಡ್ ಆಗಿವೆ. 1.7 ಬಿಲಿಯನ್ ವಿವ್‌ಗಳು ಬಂದಿರುವುದು ಪ್ರವಾಸದ ಅಧಿಕೃತ ಕ್ಷಣಗಳನ್ನು ವಿಶ್ವದ ಮುಂದೆ ಇರಿಸಲು ಟಿಕ್ ಟಾಕ್ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ದೇಶದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಗಾದ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.
ಬಾಕ್ಸ್
* ತಾಜ್‌ಮಹಲ್- 79.2 ದಶಲಕ್ಷ ವಿವ್‌ಗಳು
* ಸ್ವರ್ಣ ಮಂದಿರ- 67.6 ದಶಲಕ್ಷ ವಿವ್‌ಗಳು
* ಹಿಮಾಲಯ – 22.6 ದಶಲಕ್ಷ ವಿವ್‌ಗಳು
* ಕೆಂಪುಕೋಟೆ- 13.6 ದಶಲಕ್ಷ ವಿವ್‌ಗಳು
* ಗೇಟ್ ವೇ ಆಫ್ ಇಂಡಿಯಾ- 9.0 ದಶಲಕ್ಷ ವಿವ್‌ಗಳು

Leave a Comment