ಯೂರೋಪ್‌ಗೆ ರಾಷ್ಟ್ರಪತಿ ೮ ದಿನಗಳ ಪ್ರವಾಸ

 

ನವದೆಹಲಿ, ಸೆ. ೨: ಮೂರು ದೇಶಗಳಿಗೆ ಭೇಟಿ ನೀಡುವ ತಮ್ಮ ೮ ದಿನಗಳ ಯೂರೋಪ್ ಪ್ರವಾಸವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಭಾನುವಾರ ಆರಂಭಿಸಿದರು.
ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ಕೋವಿಂದ್ ಅವರು ಮೊದಲು ಸೈಪ್ರಸ್‌ಗೆ ಭೇಟಿ ನೀಡುವರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಅವರು ಸೈಪ್ರಸ್ ಅಧ್ಯಕ್ಷ ನಿಕೋಸ್ ಅನಸ್ತಸಿಯಾಡಸ್ ಅವರೊಂದಿಗೆ ಸಭೆ ನಡೆಸುವರು.
ನಂತರ ಕೋವಿಂದ್ ಅವರು ಸೆ. ೪ ರಂದು ಬಲ್ಗೇರಿಯಾಗೆ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ರಾದೇವ್ ಮತ್ತು ಪ್ರಧಾನಿ ಬಾಯ್ಕೊ ಬೋರಿಸೋವ್‌ರನ್ನು ಭೇಟಿ ಮಾಡುವರು. ಬಲ್ಗೇರಿಯಾದ ವಾಣಿಜ್ಯ ವೇದಿಕೆಯನ್ನು ಉದ್ದೇಶಿಸಿ ಮಾತನಾಡುವ ಕೋವಿಂದ್, ಅಲ್ಲಿನ ಸೋಫಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುವ ಕಾರ್ಯಕ್ರಮವೂ ನಿಗದಿಯಾಗಿದೆ.
ಕೊನೆಯ ಹಂತವಾಗಿ ರಾಷ್ಟ್ರಪತಿಗಳು ಸೆ. ೬ರಂದು ಝೆಕ್ ಗಣರಾಜ್ಯಕ್ಕೆ ಭೇಟಿ ನೀಡುವರು. ಸೆ. ೯ರವರೆಗೆ ಅಲ್ಲಿರುವ ಅವರು, ಅಲ್ಲಿನ ಝೆಕ್ ಅಧ್ಯಕ್ಷ ಮಿಲೋಸ್ ಜೆಮನ್‌ರೊಂದಿಗೆ ಪರಸ್ಪರ ಸಂಬಂಧ ವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸುವರು. ಜತೆಗೆ ಉಭಯ ರಾಷ್ಟ್ರಗಳ ವಾಣಿಜ್ಯ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡುವರಲ್ಲದೆ, ಚಾರ್ಲ್ಸ್ ವಿ.ವಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವಿದೆ.

Leave a Comment