ಯೂತ್ ಒಲಿಂಪಿಕ್ಸ್: ಭಾರತಕ್ಕೆ ಚೊಚ್ಚಲ ಚಿನ್ನ

ಬ್ಯುನಸ್ ಐರಿಸ್, ಅ ೯- ಅರ್ಜೆಂಟೀನದ ರಾಜಧಾನಿಯಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಜೆರೆಮಿ ಲಾರ್ಲಿನ್‌ನುಂಗ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

ಸೋಮವಾರ ತಡರಾತ್ರಿ ಅರ್ಜೆಂಟೀನದ ರಾಜಧಾನಿಯಲ್ಲಿ ನಡೆದ ೬೨ ಕೆಜಿ ತೂಕ ವಿಭಾಗದಲ್ಲಿ ೧೫ರ ಹರೆಯದ ಜೆರೆಮಿ ಒಟ್ಟು ೨೭೪ ಕೆಜಿ(೧೨೪-೧೫೦ಕೆಜಿ)ತೂಕ ಎತ್ತಿ ಹಿಡಿಯುವ ಮೂಲಕ ಭಾರತದ ಪದಕ ಖಾತೆಗೆ ಚಿನ್ನ ಸೇರಿಸಿದರು.

ಟರ್ಕಿಯ ಟಾಪ್ಟಾಸ್ ಕಾನೆರ್ ೨೬೩ ಕೆಜಿ(೧೨೨ಕೆಜಿ+೧೪೧ಕೆಜಿ) ಎತ್ತಿ ಹಿಡಿದು ಬೆಳ್ಳಿ ಪದಕ ಜಯಿಸಿದರು. ಕೊಲಂಬಿಯಾದ ವಿಲ್ಲಾರ್ ಎಸ್ಟಿವೆನ್ ಜೋಸ್(೧೨೨+೧೪೧ಕೆಜಿ=೨೬೦ಕೆಜಿ)ಕಂಚು ಜಯಿಸಿದರು.
ವಿಶ್ವ ಯೂತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಮಿರೆರಾಂ ವೇಟ್‌ಲಿಫ್ಟರ್ ಅಕ್ಟೋಬರ್ ೨೬ಕ್ಕೆ ೧೬ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಭಾರತದ ಭವಿಷ್ಯದ ವೇಟ್‌ಲಿಫ್ಟರ್ ಆಗಿ ರೂಪುಗೊಳ್ಳುತ್ತಿರುವ ಜೆರೆಮಿ ಈ ವರ್ಷಾರಂಭದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ರಾಷ್ಟ್ರೀಯ ದಾಖಲೆ ಮುರಿಯುವುದರೊಂದಿಗೆ ಬೆಳ್ಳಿ(ಯೂತ್) ಹಾಗೂ ಕಂಚಿನ(ಜೂನಿಯರ್)ಪದಕ ಜಯಿಸಿದ್ದಾರೆ.

Leave a Comment