ಯು ವಿಶ್ವಕಪ್ ಕ್ರಿಕೆಟ್ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಕ್ರೈಸ್ಟ್ ಚರ್ಚ್, ಜ ೨೯- ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ೧೯ ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ಸ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಆಸ್ಟ್ರೇಲಿಯ ತಂಡ ಅಫ್ಘಾನಿಸ್ತಾನ ತಂಡವನ್ನು ೬ ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡ ಅಲ್ಪ ಮೊತ್ತ ಕಲೆ ಹಾಕಿತು. ಆದರೆ ಆಸ್ಟ್ರೇಲಿಯಾ ಆಟಗಾರರ ಮಾರಕ ಬೌಲಿಂಗ್ ಮುಂದೆ ರನ್ ಗಳಿಸಲು ಪರದಾಡಿದ ಆಫ್ಘನ್ ತಂಡ ೧೮೧ ರನ್‌ಗಳಿಗೆ ಸರ್ವ ಪತನ ಕಂಡಿತು.
ಅಫ್ಘಾನಿಸ್ತಾನದ ಪರ ಇಕ್ರಮ್ ಅಲಿ ಖಿಲ್ ೮೦ ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕ ರೆಹ್ಮಾನುಲ್ಹಾ ೨೦
ರನ್ ಗಳಿಸಿದರು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆಸೀಸ್ ಪರ ಜೊನಾಥನ್ ಮೆರ್ಲೊ ೪, ಜಾಕ್ ಇವಾನ್ ೨, ಜಾಕ್ ಎಡ್ವಾರ್ಡ್ , ರಯಾನ್ ಹ್ಯಾಡ್ಲಿ, ವಿಲ್ ಸುತರ್‌ಲ್ಯಾಂಡ್, ಲಿಯೊಡ್ ಪೋಪ್ ತಲಾ ೧ ವಿಕೆಟ್ ಪಡೆದು ಅಫ್ಘಾನಿಸ್ಥಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ೧೮೨ ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡ ಕೇವಲ ೪ ವಿಕೆಟ್ ಕಳೆದುಕೊಂಡು ೩೭.೩ ಓವರ್‌ಗಳಲ್ಲಿ ಜಯ ಸಾಧಿಸಿತು.
ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟ್ಸ್‌ಮನ್ ೭೨ ರನ್ ಗಳಿಸಿದರೆ, ನಾಯಕ ಜಾಸನ್ ಸಂಘಾ ೨೬ ರನ್, ಪರಮ್ ಉಪ್ಪಾಳ್ ಔಟಾಗದೇ ೩೨, ಹಾಗೂ ನಾಥನ್ ಮೆಕ್ ಸ್ವೀನೆ ಔಟಾಗದೇ ೨೨ ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇದೇ ೩೦ಕ್ಕೆ ಪಾಕಿಸ್ತಾನ ಹಾಗು ಭಾರತ ನಡುವೆ ಎರಡನೇ ಸೆಮಿಫೈನಲ್ಸ್ ನಡೆಯಲಿದೆ. ಫೆಬ್ರವರಿ ೩ ರಂದು ಫೈನಲ್ ಹಣಾಹಣಿ ನಡೆಯಲಿದೆ.

Leave a Comment