ಯುವ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಅಸೂಟಿ ಆಯ್ಕೆ.

ನವಲಗುಂದ,ಮೇ19: ಯುವ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಪಟ್ಟಣದ ವಿನೋದ ಅಸೂಟಿ ಆಯ್ಕೆಯಾಗಿದ್ದಾರೆ.
ತಾಲೂಕಾ ಮಟ್ಟದಲ್ಲಿ ಮೇ-15 ರಿಂದ ಆಯಾ ತಾಲೂಕಾ ಕಾಂಗ್ರೆಸ್ ಭವನದಲ್ಲಿ ಚುನಾವಣಿ ನಡೆದು ಇಂದು ಧಾರವಾಡ ಕಾಂಗ್ರೆಸ್ ಭವನದಲ್ಲಿ ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನದ ಏಣಿಕೆಯಲ್ಲಿ ವಿನೋದ ಅಸೂಟಿ 1630 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಣದಲ್ಲಿದ್ದ ಕುಂದಗೋಳದ ಪ್ರಭುಗೌಡ ಸಂಕಾಗೌಡಸಾನಿ ಕೇವಲ 70 ಮತಗಳನ್ನು ಪಡೆದು ಪರಾಜಯಗೊಂಡಿದ್ದಾರೆ.
ಯುವ ಕಾಂಗ್ರೆಸ್ ದುರೀಣ ವಿನೋದ ಅಸೂಟಿಯವರು ಗೆಲುವಿನ ಸುದ್ದಿ ತಿಳಿದು ಪಟ್ಟಣದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಸ್ಥಳೀಯ ಕಾಂಗ್ರೆಸ್ ಭವನದಲ್ಲಿ ವಿನೋದ ಅಸೂಟಿಯವರನ್ನು ಕಾಂಗ್ರೆಸ್ ಯುವ ಕಾರ್ಯಕರ್ತರು ಹೂಮಾಲಿ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಂಜುನಾಥ ಜಾಧವ, ವಿಷ್ಣು ಮುಧೋಳೆ, ಯುವ ದುರೀಣರಾದ ವರ್ಧಮಾನಗೌಡ ಹಿರೇಗೌಡರ, ಅರ್ಜುನ ಹಳೇಮನಿ, ರಾಜು ಕೆಳಗಿನಮನಿ, ಈರಣ್ಣ ಶಿಡಗಂಟಿ, ಪ್ರಕಾಶ ಮಗಜಿ, ಮೌಲಾಸಾಬ ತಹಶೀಲ್ದಾರ, ಮಲ್ಲಿಕಾರ್ಜುನ ಹೊಸಮನಿ, ಹನಮಂತ ಗಡ್ಡಿ ಸೇರಿದಂತೆ ಯುವ ಕಾರ್ಯಕರ್ತರು ಪಾಲ್ಗೋಂಡಿದ್ದರು.

Leave a Comment